ಬಂಟ್ವಾಳ: ತಾಲೂಕು ಕಂದಾಯ ಗ್ರಾಮ ಸಹಾಯಕರ ಸಂಘದ ಕಾರ್ಯಕಾರಿಣಿ ಸಭೆಯು ಬಂಟ್ವಾಳ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಜನಾರ್ಧನ್ ಬಂಟ್ವಾಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವ ಅಧ್ಯಕ್ಷರಾಗಿ ರಾಘವ ಗೌಡ ಕುಳ, ನೂತನ ಅಧ್ಯಕ್ಷರಾಗಿ ಮೋಹನ್ ದಾಸ್ ಕಲ್ಲಡ್ಕ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸಂತೋಷ್ ಪಿಲಾತಬೆಟ್ಟು,ಕಾರ್ಯದರ್ಶಿಯಾಗಿ ಯಶೋಧ ಪಾಣೆಮಂಗಳೂರು, ಜೊತೆ ಕಾರ್ಯದರ್ಶಿಯಾಗಿ
ಯಮುನಾ, ನವೀನ್, ವನಿತಾ ಕಾಡಬೆಟ್ಟು, ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್ ಇಡ್ಕಿದು, ಖಜಾಂಚಿಯಾಗಿ ನಳಿನಿ ಕಾವಳಪಡೂರು, ಕ್ರೀಡಾ ಕಾರ್ಯದರ್ಶಿ ರಮೇಶ್ ರಾಯಿ,
ಸಾಂಸ್ಕೃತಿಕ ಕಾರ್ಯದರ್ಶಿ ಉಷಾ ಇರ್ವತ್ತೂರು, ಮಾರ್ಗದರ್ಶಕರಾಗಿ ಸುಂದರ. ಕೆ .ಬಿ. ರವರನ್ನು ಆಯ್ಕೆ ಮಾಡಲಾಯಿತು.
ಗ್ರಾಮ ಸಹಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸಿದರು. ಯತೀಶ್ ಹಡೀಲ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.