ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ಬಳಿ ರೀಗಲ್ ಪ್ಯಾಲೇಸ್ ಲಾಡ್ಚ್‍ನಿಂದ ಪ್ರೇಮಾ (19) ಎಂಬವರು ಮಾ.4 ರಂದು ಕಾಣೆಯಾಗಿರುವ ಬಗ್ಗೆ ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದವರ ಚಹರೆ:
4.5 ಅಡಿ ಎತ್ತರ, ಕಪ್ಪು ಮೈ ಬಣ್ಣ, ದಪ್ಪ ಶರೀರದವರಾಗಿದ್ದು ಬಲ ಕೈಯ ಮಧ್ಯ ಬೆರಳು ತುಂಡಾಗಿರುತ್ತದೆ. ಕೆಂಪು ಬಣ್ಣದ ಚೂಡಿದಾರ ಹಾಗೂ ಕಪ್ಪು ಬಣ್ಣದ ಶಾಲು ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ ದೂ.ಸಂಖ್ಯೆ: 0824-2220800, ಪೊಲೀಸ್ ಠಾಣೆ ದೂ.ಸಂಖ್ಯೆ:0824-2220518 ಪೊಲೀಸ್ ಇನ್ಸ್‍ಪೆಕ್ಟರ್ ಮೊಬೈಲ್ ಸಂಖ್ಯೆ:9480805339 ಸಂಪರ್ಕಿಸುವಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.