ಮಂಗಳೂರು: ಗೋಶಾಲೆಯಲ್ಲಿದ್ದ ಮೂರು ಜಾನುವಾರುಗಳನ್ನು ಕಳವುಗೈದ ಆರೋಪಿಯನ್ನು ನಗರದ ಮರವೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ರಾಝಿಕ್ (19) ಬಂಧಿತ ಆರೋಪಿ.
ಮರವೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಪಿಲ ಎಂಬ ಗೋಶಾಲೆಯ ಮೇಯಲು ಬಿಟ್ಟ ಜಾನುವಾರುಗಳಲ್ಲಿ ಒಂದು ಹೋರಿ ಹಾಗೂ 2 ಕಪಿಲ ತಳಿಯ ಹಸುಗಳನ್ನು ಗೋಕಳ್ಳರು ಕಳವುಗೈದಿದ್ದರು.
ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಮಹಮ್ಮದ್ ರಾಝಿಕ್‌ನನ್ನು ಕೆಂಜಾರು ಮರವೂರಿನಲ್ಲಿ ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಶಾಮೀಲಾದ ಕೆಲವು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.