ಪುತ್ತೂರು: ಕಾರ್ಮಿಕ ದಿನಾಚರಣೆಯ ಅಂಗವಾಗಿ ಇಂಟೆಕ್ ನೇತೃತ್ವದಲ್ಲಿ, ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ, ಕರ್ನಾಟಕ ಸ್ಟೇಟ್ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಛೇರ್ಮನ್ ಆಗಿರುವ ರಾಕೇಶ್ ಮಲ್ಲಿಯವರ ಸಾರಥ್ಯದಲ್ಲಿ ಚಿತ್ರಾಪುರದಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಚಂದ್ರಹಾಸ ಶೆಟ್ಟಿ ಮಾಲಕತ್ವದ ‘ಪುತ್ತೂರು ಫ್ರೆಂಡ್ಸ್’ ತಂಡವೂ ಪ್ರಥಮ ಬಹುಮಾನವನ್ನು ಪಡೆದಿದೆ.

ಖ್ಯಾತ ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ ರವರ ಮಾರ್ಗದರ್ಶನದಲ್ಲಿ ಉತ್ತಮ ರೀತಿಯಲ್ಲಿ ಪಂದ್ಯಾಟವಾಡಿದ ‘ಪುತ್ತೂರು ಫ್ರೆಂಡ್ಸ್’ ತಂಡವೂ ಪ್ರಥಮ ಬಹುಮಾನವಾಗಿ 50 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದೆ.
ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಎಸ್.ಡಿ.ಎಂ. ತಂಡವು ಪಡೆಯಿತು.

ಗಂಗಾಧರ ಶೆಟ್ಟಿ ಕೈಕಾರ, ರೋಶನ್ ರೈ ಬನ್ನೂರು, ಪ್ರವೀಣ್ ನಾಯ್ಕ್, ಪ್ರವೀಣ್ ಶೆಟ್ಟಿ ಅಳಕೆಮಜಲು, ಪ್ರಣಾಮ್ ಶೆಟ್ಟಿ ಕೈಕಾರ, ಬಿಪಿನ್ ಶೆಟ್ಟಿ ಸವಣೂರು, ಪ್ರದೀಪ್ ಶೆಟ್ಟಿ, ಲಿಖಿತ್ ರೈ, ಸುಜಿತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
