ಪುತ್ತೂರು: ಸರ್ಕಾರಿ ಇಲಾಖೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಇತಿಹಾಸ ಕಂಡದರಿಯದಷ್ಟು ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಚ್. ಮಹಮ್ಮದ್ ಆಲಿ ರವರು ಆರೋಪಿದರು.
ಅವರು ಬಿಜೆಪಿ ಕಾಂಗ್ರೆಸ್ ಮುಖಂಡರ ವಿರುದ್ಧ ನೀಡಿದ ದೂರನ್ನು ಖಂಡಿಸುವುದಕ್ಕಾಗಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ ಸರಕಾರ ಅಧಿಕಾರದಲ್ಲಿದೆ, ಬಿಜೆಪಿ ಶಾಸಕರೂ ಇದ್ದಾರೆ ಭ್ರಷ್ಟಾಚಾರಗಳನ್ನು ತಡೆಯುವ ಕರ್ತವ್ಯ ಅವರದ್ದಾಗಿದೆ. ನಾಲ್ಕು ವರ್ಷಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆಗಾಗಿ ಶಾಸಕರು ಯಾವ ಕ್ರಮಕೈಗೊಂಡಿದ್ದಾರೆ. ಯಾವ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಶಾಸಕರು ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ, ಈ ರೀತಿಯ ಯಾವುದೇ ಕೆಲಸಗಳನ್ನು ಮಾಡದೇ ಭ್ರಷ್ಟಾಚಾರದ ವಿರುದ್ದ ಧ್ವನಿ ಎತ್ತಿದಂತಹ ಕಾಂಗ್ರೆಸ್ ನಾಯಕರ ಮೇಲೆ ದೂರು ನೀಡಿ ಬೆದರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಕಚೇರಿಯಲ್ಲಿ ಕೆಲಸವಾಗ ಬೇಕಿದ್ದರೆ ಏನು ಮಾಡಬೇಕು..??, ಸರ್ವೇ ಇಲಾಖೆಯಲ್ಲಿ ಕೆಲಸ ಮಾಡ್ಬೇಕಿದ್ದರೇ ಏನು ಮಾಡಬೇಕು..??, ನಗರ ಸಭೆಯಲ್ಲಿ ಕೆಲಸವಾಗಬೇಕಿದ್ದರೆ ಎಷ್ಟು ಲಂಚ ನೀಡಬೇಕು ಎಂದು ಜನರಿಗೆ ತಿಳಿದಿದೆ. ಯಾವ ಇಲಾಖೆಯೂ, ಯಾವ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದರು.
ಈ ನಾಲ್ಕು ವರ್ಷಗಳಲ್ಲಿ ಶಾಸಕರು ಭ್ರಷ್ಟಾಚಾರ ನಿರ್ಮೂಲನೆಗೆ ಯಾವ ಕಾರ್ಯ ನಿರ್ವಹಿಸಿದ್ದರೆ. ಜನರಿಗೆ ತೊಂದರೆಯಾದಾಗ ಜನರ ಪರವಾಗಿ ಧ್ವನಿ ಎತ್ತುವಂತದ್ದು ನಮ್ಮ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ರಾಜಕೀಯವಾಗಿ ಆರೋಪಗಳನ್ನು ಮಾಡುತ್ತೇವೆ ಇದು ಪ್ರತಿಪಕ್ಷವಾಗಿ ನಮ್ಮ ಕರ್ತವ್ಯವಾಗಿದೆ. ಇಂದು ಕೇವಲ ಟೀಕೆಯನ್ನು ಸಹಿಸಲಾಗದ ರಾಜಕೀಯ ಪಕ್ಷ, ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದ ವೇಳೆ ಎನೆಲ್ಲಾ ಟೀಕೆಯನ್ನು ಮಾಡಿದೆ. ಆದರೇ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಯಾವುದೇ ದೂರನ್ನು ದಾಖಲಿಸಲಿಲ್ಲ, ರಾಜಕೀಯ ವಿಚಾರವನ್ನು ರಾಜಕೀಯವಾಗಿಯೇ ಎದುರಿಸಲು ಸಮರ್ಥರಾಗಿರಬೇಕು ಎಂದರು.
ರಾಜಾರೋಷವಾಗಿ ಬ್ರೋಕರ್ ಗಳು ಮಿನಿ ವಿಧಾನ ಸೌಧದ ಜಗಳಿಗಳಲ್ಲಿ ಓಡಾಡುತ್ತಿದ್ದಾರೆ ಆದರೇ ಈ ಬಗ್ಗೆ ಶಾಸಕರು ಯಾಕೇ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ, ಶಾಸಕರ ಕಚೇರಿಗೆ ಮಿನಿ ವಿಧಾನ ಸೌಧದ ಮುಂಭಾಗದಲ್ಲಿದ್ದರು ಈ ಬಗ್ಗೆ ಯಾಕೇ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿ ಆಡಳಿತಕ್ಕೆ ಬಂದ ನಂತರವೇ ಮಾಮೂಲಿ ಹಣ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ ಎಂದರು.
ಬಿಜೆಪಿ ಶಾಸಕರಾದರೂ ಅವರ ಜನಪರ ಕೆಲಸ ಕಾರ್ಯಗಳಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತದೆ. ಕಾನೂನಾತ್ಮಕವಾಗಿ ಕೆಲಸ ಮಾಡಿ. ಇಲ್ಲವಾದರೆ ನಮಗೂ ಕೇಸ್ ನೀಡಲು ತಿಳಿದಿದೆ. ಬಿಜೆಪಿಯ ವಿಧಾನ ಸಭಾ ಕ್ಷೇತ್ರದ ಮಾಜಿ ಅಧ್ಯಕ್ಷರೋರ್ವರು ಈ ಬಗ್ಗೆ ನನ್ನಲ್ಲಿಯೇ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಮಗೆ ನಾಚಿಗೆಯಾಗುತ್ತಿದೆ ಎಂದು ಶಾಸಕರ ಭ್ರಷ್ಟಾಚಾರದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದೇ ನಿಮ್ಮ ಮಾಜಿ ಅದ್ಯಕ್ಷರು., ನೀವೂ ಒಂದು ಕೇಸ್ ನೀಡಿದ್ದು, ನಾವೂ ದಾಖಲೇ ಸಹಿತ ಹಲವು ಕೇಸ್ ಗಳನ್ನು ನೀಡುತ್ತೇವೆ ಎಂದರು.