ಪುತ್ತೂರು: ರಾಷ್ಟ್ರೀಯ ಬ್ಯಾಂಕ್ ಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸ್ಥಳೀಯ ಸಹಕಾರಿ ಸಂಘಗಳು/ ಕೆ.ಎಂ.ಎಫ್/ ಕ್ಯಾಂಪ್ಕೋ ಸೇರಿದಂತೆ ನಾನಾ ಸಹಕಾರ ಸಂಘಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆಯುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ‘ವಿದ್ಯಾಮಾತಾ ಅಕಾಡೆಮಿ’ಯಲ್ಲಿ ಪೂರ್ವ ತಯಾರಿಯ ತರಬೇತಿಯನ್ನು ಪ್ರಾರಂಭಿಸಲಾಗಿದೆ.

ತರಬೇತಿಯು ಆನ್ಲೈನ್ ಮತ್ತು ನೇರ ತರಗತಿಯ ರೂಪದಲ್ಲಿ ಲಭ್ಯವಿದ್ದು, ಆಸಕ್ತರು ಪ್ರವೇಶಾತಿ ಯನ್ನು ಪಡೆದುಕೊಳ್ಳಬಹುದಾಗಿದೆ. ನೇರ ತರಗತಿಗಳು ವಾರದ 5 ದಿನ ಲಭ್ಯವಿದ್ದು, ಮಧ್ಯಾಹ್ನ 1 ರಿಂದ 3 ರ ವರಗೆ ನಡೆಯುತ್ತದೆ. ಅಲ್ಲದೇ ವಾರಾಂತ್ಯ ತರಗತಿಗಳು ಲಭ್ಯವಿದೆ.
ಸದ್ಯ ಉದ್ಯೋಗದಲ್ಲಿರುವವರಿಗಾಗಿ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಗೃಹಿಣಿಯರಿಗೆ ಅನುಕೂಲ ವಾಗುವಂತೆ ಆನ್ಲೈನ್ ತರಗತಿಗಳು ರಾತ್ರಿ 7 ರಿಂದ 9 ರ ವರೆಗೆ ವಾರದ 4 ದಿನ ಲಭ್ಯವಿರಲಿದೆ. ತರಬೇತಿಯ ಅವಧಿಯು 3 ತಿಂಗಳು. ಈ ಸಂದರ್ಭದಲ್ಲಿ ನೇಮಕಾತಿಗಳಿಗೆ ಸಂಬಂಧಿಸಿದ ವಿಷಯಾಧಾರಿತ ತರಗತಿಗಳು ನುರಿತ ತರಬೇತುದಾರರಿಂದ ನಡೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ವಿದ್ಯಾಮಾತಾ ಅಕಾಡೆಮಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ ಹಾಗೂ ತರಬೇತಿ ಕೇಂದ್ರ., ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201, ಫೋನ್ ನಂ: 9620468869 / 9148935808 / 8590773486