ಬೆಂಗಳೂರು: ಯುವತಿಯ ಮಾಜಿ ಲವರ್, ಹಾಲಿ ಪ್ರೇಮಿಯನ್ನು ಕೊಲೆ ಮಾಡಿರೋ ಘಟನೆ ನಗರದ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಸಮರ್ಥ್ ನಾಯರ್ ಕೊಲೆಯಾದ ದುರ್ದೈವಿಯಾಗಿದ್ದಾನೆ.
ಶಿವಮೊಗ್ಗ ಮೂಲದ ಸಮರ್ಥ್ ನಾಯರ್ ಭದ್ರಾವತಿ ಮೂಲದ ಯುವತಿಯನ್ನ ಪ್ರೀತಿಸುತಿದ್ದನಂತೆ.

ಯುವತಿ ಈ ಹಿಂದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕಿರಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಆದರೆ ಹಲವಾರು ವಿಚಾರಕ್ಕೆ ಕಿರಣ್ ಜೊತೆಗೆ ಯುವತಿ ಬ್ರೇಕಪ್ ಮಾಡಿಕೊಂಡು, ಬಳಿಕ ಸಮರ್ಥ್ ಜೊತೆಯಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಳಂತೆ.

ಈ ನಡುವೆ ಕಳೆದ ಶನಿವಾರ ಸಮರ್ಥ್ ಜೊತೆಗಿದ್ದ ಸಮಯದಲ್ಲಿ ಎಂಟ್ರಿ ಕೊಟ್ಟಿದ್ದ ಕಿರಣ್ ತನ್ನ ಗೆಳೆಯ ಅರುಣ್ ಹಾಗೂ ರಾಕೇಶ್ ಜೊತೆಗೆ ಸೇರಿ ಹಲ್ಲೆ ಮಾಡಿದ್ದನಂತೆ. ತಲೆಗೆ ಕಾಲಿನಿಂದ ಒದ್ದು ಗೋಡೆಗೆ ತಲೆ ಹಿಡಿದು ಆರೋಪಿಗಳು ಚಚ್ಚಿದ್ದರಂತೆ. ಹಲ್ಲೆಗೊಳಗಾಗಿದ್ದ ಬಳಿಕ ಸಮರ್ಥ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಪೊಲೀಸರು ಮೂವರು ಅರೋಪಿಗಳಾದ ಕಿರಣ್, ಅರುಣ್ ಮತ್ತು ರಾಕೇಶ್ನನ್ನು ಬಂಧಿಸಿದ್ದಾರೆ.