ಪುತ್ತೂರು: ಶರತ್ ಕೇಪುಳು ನೇತೃತ್ವದ ‘ಅಭಿರಾಮ್ ಫ್ರೆಂಡ್ಸ್’ ಪುತ್ತೂರು ಪ್ರಸ್ತುತ ಪಡಿಸುವ ಎಂಟು ತಂಡಗಳ ಓವರ್ ಆರ್ಮ್ ಫುಲ್ ಗ್ರೌಂಡ್ ಕ್ರಿಕೆಟ್ ಟೂರ್ನ್ ಮೆಂಟ್ ‘ಪುತ್ತೂರು ಪ್ರಿಮೀಯರ್ ಲೀಗ್-2022’ ಸೀಸನ್-4 ಮೇ.7 ರಂದು ಕೊಂಬೆಟ್ಟು ಜೂನಿಯರ್ ಕಾಲೇಜ್ ಗ್ರೌಂಡ್ ನಲ್ಲಿ ನಡೆಯಿತು.

ಮಾಧವ ಶೇಟ್ ಮಾಲಕತ್ವದ ಆಶೀರ್ವಾದ್ ಗೋಲ್ಡನ್ ಈಗಲ್ಸ್ ತಂಡವು ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದೆ. ಹಾಗೆಯೇ ಜಯರಾಮ್ ರೈ ಮತ್ತು ಚಂದ್ರಶೇಖರ್ ರೈ ಮಾಲಕತ್ವದ ಸಿಝ್ಲರ್ ಸಾಮೆತ್ತಡ್ಕ ತಂಡವೂ ದ್ವಿತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದೆ.

ಮ್ಯಾನ್ ಆಫ್ ಸಿರೀಸ್ ಬಹುಮಾನವನ್ನು ಆಶೀರ್ವಾದ್ ತಂಡದ ರೀತು ರವರು ಪಡೆದುಕೊಂಡಿದ್ದು, ಫೈನಲ್ ಮ್ಯಾನ್ ಆಫ್ ದ ಮ್ಯಾಚ್ ಬಹುಮಾನವನ್ನು ಆಶೀರ್ವಾದ್ ತಂಡದ ಸನತ್ ಸುವರ್ಣ, ಬೆಸ್ಟ್ ಬೌಲರ್ ಬಹುಮಾನವನ್ನು ಸಿಝ್ಲರ್ ತಂಡದ ಅಲೋಕ್ ಹಾಗೂ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಬಹುಮಾನವನ್ನು ಸಿಝ್ಲರ್ ತಂಡದ ಲೋಕಿ, ಬೆಸ್ಟ್ ಕೀಪರ್ ಬಹುಮಾನವನ್ನು ಆಶೀರ್ವಾದ್ ತಂಡದ ರಕ್ಷಿತ್, ಬೆಸ್ಟ್ ಫೀಲ್ಡರ್ ಬಹುಮಾನವನ್ನು ಸಿಝ್ಲರ್ ತಂಡದ ಯಜ್ಞೆಶ್ ಶೆಟ್ಟಿ ಹಾಗೂ ಗೇಮ್ ಚೇಂಜರ್ ಆಫ್ ದಿ ಟೂರ್ನ್ ಮೆಂಟ್ ಬಹುಮಾನವನ್ನು ಸನತ್ ರವರು ತಮ್ಮದಾಗಿಸಿಕೊಂಡಿದ್ದಾರೆ.
