ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಶಾಂತಿನಗರ ನಿವಾಸಿ ಅಣ್ಣು(65) ರವರು ಮೇ.13 ರಂದು ನಿಧನರಾದರು.

ಪೈಂಟಿಂಗ್ ವೃತ್ತಿ ನಡೆಸುತ್ತಿದ್ದ ಅಣ್ಣು ರವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದು, 13 ವರ್ಷಗಳ ಕಾಲ ಅಯ್ಯಪ್ಪ ಮಾಲೆ ಧರಿಸಿದ್ದರು. ಮೂರು ವರ್ಷಗಳ ಕಾಲ ಶಾಂತಿನಗರದಲ್ಲಿ ಮಾಲಧಾರಿಗಳನ್ನು ಒಗ್ಗೂಡಿಸಿಕೊಂಡು ಕ್ಯಾಂಪ್ ನಡೆಸಿದ್ದರು. ಇತ್ತೀಚಿಗೆ ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.
ಮೃತರು ಪತ್ನಿ ಭಾಗೀರಥಿ, ಮಕ್ಕಳಾದ ಸುಶೀಲ, ಹರೀಶ, ಭರತ್, ದೇವಿಪ್ರಸಾದ್ ಮತ್ತು ಪ್ರದೀಪ್ ರನ್ನು ಅಗಲಿದ್ದಾರೆ.