ದಯಾ ಕ್ರಿಯೇಷನ್ ಅರ್ಪಿಸುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ “ಜಗದೊಡತಿ” ಕನ್ನಡ ಭಕ್ತಿಗೀತೆಯ ಪೋಸ್ಟರ್ ಬಿಡುಗಡೆಗೊಂಡಿತು.

‘ಜಗದೊಡತಿ’ ಕನ್ನಡ ಭಕ್ತಿಗೀತೆಗೆ ವಿನಯ್ ಪೂಜಾರಿ ಕನ್ಯಾನ ಸಾಹಿತ್ಯ ಬರೆದಿದ್ದು, ಆಕಾಂಕ್ಷ ಆರ್. ಶೆಟ್ಟಿ ಗಾಯನದಲ್ಲಿ ಮೂಡಿಬರಲಿರುವ ಈ ಹಾಡಿಗೆ ರಾಗ ಸಂಯೋಜನೆ ಉದಯ್ ಆರ್. ಪುತ್ತೂರು ನೀಡಿದ್ದಾರೆ.

ಸಂಗೀತ ಅಶ್ವಿನ್ ಪುತ್ತೂರು ನೀಡಿದ್ದು, ಈ ಹಾಡಿನ ನಿರ್ಮಾಣ ಸತೀಶ್ ಕುಮಾರ್ ಬಜಾಲ್ ಮತ್ತು ರಾಜೇಶ್ ಶೆಟ್ಟಿ ಮಾಡಿದ್ದು, ನೃತ್ಯ ತನ್ವಿ ಶೆಟ್ಟಿ ಸೂರಂಬೈಲು ನಿರ್ವಹಿಸಿದ್ದು, ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರು ನಿರ್ವಹಿಸಿದ್ದಾರೆ.


ಪ್ರಚಾರ ಕಲೆ ಮತ್ತು ಸಂಕಲನ ರಿತೇಶ್ ಸೂಪಲಚ್ಚಿಲ್ ಹಾಗೂ ಛಾಯಾಗ್ರಹಣವನ್ನು ಕಾರ್ತಿಕ್ ಸುವರ್ಣ ನಿರ್ವಹಿಸಿದ್ದಾರೆ.
ಈ ಕನ್ನಡ ಭಕ್ತಿಗೀತೆ ಶೀಘ್ರದಲ್ಲಿ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.