ಪುತ್ತೂರು: ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ‘ಶುಭ್ರ ಬಂಗಾರ’ ಸ್ಕೀಮ್ ನ ಅಡಿಯಲ್ಲಿ ಗ್ರಾಹಕರ ಮತ್ತು ಸಾರ್ವಜನಿಕರ ಚಿನ್ನಾಭರಣಗಳಿಗೆ ಉಚಿತ ರ್ವಿಸ್ ಕ್ಯಾಂಪ್ ಆಯೋಜಿಸುತ್ತಿದೆ.
ಜೂನ್ 20 ರಿಂದ 23ರ ವರೆಗೆ ಮೂರು ದಿನಗಳ ಕಾಲ ಈ ಕ್ಯಾಂಪ್ ನಡೆಯಲಿದೆ.
ನಿಮ್ಮ ಚಿನ್ನಾಭರಣಗಳು ಹೊಳೆಯುತ್ತಿಲ್ಲವೇ..? ತುಂಡಾಗಿದೆಯೇ..? ಬೆಂಡಾಗಿದೆಯೇ..? ಅಥವಾ ಸರಿಯಾಗಿಲ್ಲವೆ..? ಹಾಗಿದ್ದಲ್ಲಿ ಮುಳಿಯ ಜ್ಯುವೆಲ್ಸ್ಗೆ ಭೇಟಿ ನೀಡಿ ಉಚಿತವಾಗಿ ರ್ವಿಸ್ ಮಾಡಿಸಿಕೊಳ್ಳಬಹುದಾಗಿದೆ. ಈ ಉಚಿತ ಸೇವೆಯಲ್ಲಿ ಆಭರಣಗಳನ್ನು ತೊಳೆದು ಶುದ್ಧ ಮಾಡುವುದು, ಚಿನ್ನದ ಕೋಟಿಂಗ್ ಮಾಡುವುದು, ತುಂಡಾದ ಆಭರಣಗಳ ಜೋಡಣೆ, ಸುವ್ಯವಸ್ಥಿತ ರೀತಿಯ ರಿಪೇರಿಗಳನ್ನು ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಮುಳಿಯ ಜ್ಯುವೆಲ್ಸ್ನ ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್ ಮತ್ತು ಬೆಂಗಳೂರಿನ ಮಳಿಗೆಗಳಲ್ಲಿ ಈ ಉಚಿತ ರ್ವಿಸ್ ಕ್ಯಾಂಪ್ ನಡೆಯುತ್ತದೆ.
ಹೆಚ್ಚಿನ ಮಾಹಿತಿಗೆ ಉಚಿತ ಕರೆ ಸಂಖ್ಯೆ- 1800 4252 916 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.