ಬಂಟ್ವಾಳ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕೊಡಾಜೆಯ ಹೋಟೆಲ್ ವೊಂದರ ನೌಕರರು ತ್ಯಾಜ್ಯ ಎಸೆಯುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಸೆ.12 ರ ಮಧ್ಯರಾತ್ರಿ ನಡೆದಿದೆ.

ಕೆಲ ಸಮಯಗಳಿಂದ ಈ ಭಾಗದಲ್ಲಿ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಗಮನಿಸುತ್ತಿದ್ದ ಸಾರ್ವಜನಿಕರು ತ್ಯಾಜ್ಯ ಎಸೆಯುವವರನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕು ಎಂದು ಕಾಯುತ್ತಿದ್ದರು, ಈ ವೇಳೆ ನಿನ್ನೆ ತಡರಾತ್ರಿ ತ್ಯಾಜ್ಯ ಎಸೆಯಲು ಬಂದ ಹೋಟೆಲ್ ನೌಕರರು ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದರೆನ್ನಲಾಗಿದೆ.

ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿದ್ದವರನ್ನು ಠಾಣೆಗೆ ಕರೆದೊಯ್ಯಿದಿದ್ದಾರೆ ಎಂದು ತಿಳಿದು ಬಂದಿದೆ.
