ಪುತ್ತೂರು: ಬಿ.ರಮಾನಾಥ ರೈ ಅಭಿಮಾನಿ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಮಾಜಿ ಸಚಿವರು, ಕೆ.ಪಿ.ಸಿ.ಸಿ ಉಪಾದ್ಯಕ್ಷರಾದ ಬಿ.ರಮಾನಾಥ ರೈ ರವರ ಹುಟ್ಟುಹಬ್ಬ ಆಚರಣೆಯ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಸೆ.12 ರಂದು ನಡೆಯಿತು.
ಸೆ.15 ರಂದು ಮದ್ಯಾಹ್ನ 11.30 ರಿಂದ ಹುಟ್ಟುಹಬ್ಬದ ಕಾರ್ಯಕ್ರಮವು ಬಿರುಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ನಡೆಯಲಿದೆ. ಹುಟ್ಟು ಹಬ್ಬದ ಅಂಗವಾಗಿ ಆಶ್ರಮವಾಸಿಗಳಿಗೆ ಬಟ್ಟೆ ವಿತರಣೆ,ಸಾಧಕರಿಗೆ ಸನ್ಮಾನ ಹಾಗೂ ಸಹಭೋಜನಾ ನಡೆಯಲಿದೆ.
ವಿಶೇಷ ಆರ್ಷಣೆಯಾಗಿ ಚಂದ್ರಶೇಖರ ಹೆಗ್ಡೆ ಹಾಗೂ ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಚಿವರಾದ ಬಿ ರಮಾನಾಥ ರೈ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್ಯ ಎನ್.ಎಸ್.ಯು.ಐ ಉಪಾದ್ಯಕ್ಷರಾದ ಫಾರೋಕ್ ಬಾಯಾಬೆ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪ್ರಸಾದ್ ಪಾಣಾಜೆ, ಜಗದೀಶ್ ಕಜೆ, ಮಾಜಿ ಪುರಸಭೆ ಸದಸ್ಯರಾದ ಅನ್ವರ್ ಖಾಸಿಂ,ಇಸಾಕ್ ಸಾಲ್ಮರ, ಬಶೀರ್ ಪರ್ಲಡ್ಕ, ಗಂಗಾಧರ ಶೆಟ್ಟಿ ಎಲಿಕ, ರವಿಪ್ರಸಾದ್ ಶೆಟ್ಟಿ ಬನ್ನೂರುಗುತ್ತು, ದಾಮೋದರ್ ಮುರ, ಶಾನವಾಸ್ ಬಪ್ಪಳಿಗೆ, ಹನೀಫ್ ಮುಂಡೂರು ಉಪಸ್ಥಿತರಿದ್ದರು.