ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪ ನಿರ್ದೇಶಕರ ಕಛೇರಿ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ, ದ.ಕ.ಜಿ.ಪ. ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪಡಂಗಡಿ ಇದರ ಸಹಯೋಗದಿಂದ ಸೆ.26 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14 ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆಯ ಬಾಲಕಿಯರ ಕಬಡ್ಡಿ ತಂಡದ ಕು. ಪ್ರೀತಿಕಾ ಜೆ , ಕು.ದೀಕ್ಷಾ, ಕು.ವಿಜೇತಾ, ಹಾಗೂ ಕು.ಅನನ್ಯ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ .
![](https://zoomintv.online/wp-content/uploads/2022/09/WhatsApp-Image-2022-09-27-at-8.21.47-AM-1024x768.jpeg)
ಇವರಿಗೆ ಶಾಲಾ ಮುಖ್ಯ ಶಿಕ್ಷಕಿ ವೆನಿಶಾ ಬಿ. ಎಸ್, ಶಿಕ್ಷಕಿ ವಿನೀತಾ ಪಿರೇರ ,ಶಿಕ್ಷಕಿ ವಿಲ್ಮಾ ಫರ್ನಾಂಡಿಸ್, ಡೈನ ಸಿಕ್ವೇರಾ ಮಾರ್ಗದರ್ಶನದಲ್ಲಿ ಶಾಲಾ ಸಹಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿರುತ್ತಾರೆ.
![](https://zoomintv.online/wp-content/uploads/2022/09/IMG-20220913-WA0065-1-584x1024.jpg)