ನವರಾತ್ರಿ ಬಂತೆಂದರೆ ಸಾಕು ಎಲ್ಲೆಡೆ ಹುಲಿಗಳದ್ದೇ ಅಬ್ಬರ, ದೇಶ-ವಿದೇಶದಲ್ಲಿ ಸದ್ದು ಮಾಡುತ್ತಿರುವ ಹುಲಿ ವೇಷದ ಸೊಬಗು ಕೇವಲ ಮನೋರಂಜನೆಗೆ ಮಾತ್ರ ಸೀಮಿತವಲ್ಲ; ಬದಲಾಗಿ ಅದರ ಹಿಂದೆ ನಂಬಿಕೆ ಹಾಗೂ ಆರಾಧನೆಯೂ ಅಡಕವಾಗಿದೆ. ಅದೇ ರೀತಿ ಹಲವು ಕಡೆಗಳಲ್ಲಿ ಮನರಂಜನೆಗಾಗಿ ‘ಪಿಲಿ ಗೊಬ್ಬು’, ‘ಪಿಲಿ ನಲಿಕೆ’, ‘ಪಿಲಿ ಪರ್ಬ’, ಹೀಗೆ ಹಲವು ಹೆಸರುಗಳಲ್ಲಿ ಹುಲಿ ವೇಷ ಹಾಕಿ ಜನರನ್ನು ರಂಜಿಸುವುದಕ್ಕಾಗಿ ಹಾಗೂ ನಮ್ಮ ಸಾಂಸ್ಕೃತಿಕ ಸೊಬಗನ್ನು ಎಲ್ಲೆಡೆಯು ಪಸರಿಸುವುದಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಅದೇ ರೀತಿ ನಮ್ಮ ಮುತ್ತಿನ ನಗರಿ ಪುತ್ತೂರಿನಲ್ಲಿಯೂ ಇದೇ ಮೊದಲ ಬಾರಿಗೆ ಮಾಜಿ ಶಾಸಕಿ ‘ಶಕುಂತಳಾ ಶೆಟ್ಟಿ’ ಹಾಗೂ ZOOM.INTV ನೇತೃತ್ವದಲ್ಲಿ ‘ಪುತ್ತೂರ್ದ ಪಿಲಿ ರಂಗ್ Season-1’ ವಿಶೇಷ ಕಾರ್ಯಕ್ರಮ ಅ.1 ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.

ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮವಾಗಿ ಆಯೋಜಿಸಲಾದ ‘ಪಿಲಿ ರಂಗ್’ ಕಾರ್ಯಕ್ರಮವು ನಾಳೆ (ಅ.1) ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದ್ದು, ರಾತ್ರಿಯ ವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯಾಗಿ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಅತಿಥಿಗಳಿಗೆ ವಿಶೇಷ ವೇದಿಕೆ..:
ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ವಿಶೇಷ ವೇದಿಕೆಯನ್ನು ಮಾಡಲಾಗಿದ್ದು, ಅತಿಥಿಗಳೆಲ್ಲರನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
ಮಹಿಳೆಯರಿಗೆ ಪ್ರತ್ಯೇಕ ಆಸನಗಳು, ಗ್ಯಾಲರಿ :
ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ಮಹಿಳೆಯರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಗ್ಯಾಲರಿಗಳಲ್ಲಿ ಕೂತು ಮಹಿಳೆಯರು ಕಾರ್ಯಕ್ರಮವನ್ನು ವೀಕ್ಷಿಸಬಹುದಾಗಿದೆ.
ವಿಶೇಷ ಆಕರ್ಷಣೆ ‘ಸುಷ್ಮಾ ರಾಜ್’ ಮತ್ತು ತಂಡ :
ಹುಲಿ ಕುಣಿತದ ಮೂಲಕವೇ ದೇಶ-ವಿದೇಶಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಮಹಿಳಾ ಹುಲಿಕುಣಿತಗಾರ್ತಿ, ಇಂಡಿಯನ್ ರಿಯಾಲಿಟಿ ಶೋ ಫೈನಲಿಸ್ಟ್, ಸ್ಯಾಂಡಲ್ ವುಡ್ ನಟಿ, ಕರಾವಳಿ ಟ್ರೆಂಡಿಂಗ್ ಟ್ಯಾಲೆಂಟ್ ‘ಸುಷ್ಮಾ ರಾಜ್’ ಮತ್ತು ಅವರ ತಂಡದವರು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಲಿದ್ದಾರೆ.

ಹುಲಿ ಕುಣಿತಕ್ಕೆ 3 ಅಡಿ ಎತ್ತರದ ವೇದಿಕೆ : ಪ್ರಥಮ ಬಾರಿಗೆ ಜಿಲ್ಲೆಯ ಹಲವು ತಂಡಗಳು ಪುತ್ತೂರಿಗೆ..:
‘ಪುತ್ತೂರ್ದ ಪಿಲಿ ರಂಗ್ Season-1’ ವಿಶೇಷ ಕಾರ್ಯಕ್ರಮದ ಹುಲಿ ಕುಣಿತಕ್ಕೆ 3 ಅಡಿ ಎತ್ತರದ ವೇದಿಕೆ ಸಿದ್ದಗೊಂಡಿದ್ದು, ಪ್ರಥಮ ಬಾರಿಗೆ ಜಿಲ್ಲೆಯ ವಿವಿಧೆಡೆಯ ತಂಡಗಳು ಮುತ್ತಿನ ನಗರಿ ಪುತ್ತೂರಿನಲ್ಲಿ ತಾಸೆ ಪೆಟ್ಟಿಗೆ ಹೆಜ್ಜೆ ಹಾಕಲಿದೆ. ಮಂಗಳೂರು, ಕಲ್ಲಡ್ಕ, ಪುತ್ತೂರು ವಿಟ್ಲ ಸೇರಿದಂತೆ ಹಲವು ಕಡೆಯ ಖ್ಯಾತ ಹುಲಿವೇಷ ತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

ಹಲವರಿಗೆ ಸನ್ಮಾನ..:
ವಿಶೇಷವಾಗಿ ಹಲವು ಸಾಧಕರನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.
ಫೋಟೋಗ್ರಫಿ ಕಾಂಟೆಸ್ಟ್..:
ಕಾರ್ಯಕ್ರಮದಲ್ಲಿ ಫೋಟೋಗ್ರಫಿ ಕಾಂಟೆಸ್ಟ್ ಕೂಡ ಇದ್ದು, ಪಿಲಿರಂಗ್ ಕುಣಿತವನ್ನು ನಿಮ್ಮ ಭಂಗಿಯಲ್ಲಿ ಕ್ಲಿಕ್ಕಿಸಿ ಕಳುಹಿಸಿಕೊಟ್ಟರೆ, ಉತ್ತಮ ಫೋಟೋಗ್ರಫಿಗಾಗಿ 5ಸಾವಿರ ರೂ. ಬಹುಮಾನ ದೊರೆಯಲಿದೆ. ರಿಜಿಸ್ಟ್ರೇಷನ್ ಗಾಗಿ 7892570932ಗೆ ಕರೆ ಮಾಡಬಹುದಾಗಿದೆ..

‘ಅಂತರೂಪ’ ಕಿರುಚಿತ್ರದ ‘ನಟ-ನಟಿಯರು’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ‘ತಾಸೆ’ ತಂಡಗಳು ಆಗಮಿಸಲಿದ್ದು, ಇನ್ನಷ್ಟು ಮೆರುಗು ಹೆಚ್ಚಿಸಲಿದ್ದಾರೆ. ಕರಾವಳಿಯ ಖ್ಯಾತ ನಿರೂಪಕಿ, ಸುವರ್ಣ ಸೂಪರ್ ಸ್ಟಾರ್ ಶೋ ವಿನ್ನರ್ ‘ಪ್ರಜ್ಞಾ ಓಡಿಲ್ನಾಳ’ ರವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ನಾಳೆ(ಅ.1) ಬೆಳಿಗ್ಗೆ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮವು ರಾತ್ರಿಯವರೆಗು ನಡೆಯಲಿದ್ದು, ರಾತ್ರಿಯ ವೇಳೆ ಕಾರ್ಯಕ್ರಮ ವೀಕ್ಷಣೆಗೆ ಲೈಟ್ಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಲೈಟ್ಸ್ ಬೆಳಕಿನ ಜೊತೆ, ತಾಸೆಯ ಏಟಿಗೆ ಹುಲಿಗಳ ಅಬ್ಬರದ ಹೆಜ್ಜೆಗಳು ನೆರೆದವರ ಕಣ್ಮನ ಸೆಳೆಯಲಿದೆ.

‘ಪುತ್ತೂರ್ದ ಪಿಲಿ ರಂಗ್ Season-1’ ಕಾರ್ಯಕ್ರಮದಲ್ಲಿ ವಿಜೇತ ತಂಡಕ್ಕೆ 1 ಲಕ್ಷ ರೂ. ಬಹುಮಾನ ದೊರೆಯಲಿದ್ದು, ದ್ವಿತೀಯ ತಂಡಕ್ಕೆ 50 ಸಾವಿರ ರೂ. ದೊರೆಯಲಿದೆ. ಅದೇ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗು ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ..
