ಸುಳ್ಯ: ಸಾಲದ ಕಂತು ಕಟ್ಟಲಾಗದೆ ಬ್ಯಾಂಕ್ ಗೆ ನುಗ್ಗಿದ ವ್ಯಕ್ತಿಯೊಬ್ಬ ಪೆಟ್ರೋಲ್ ಚೆಲ್ಲಿ ಬ್ಯಾಂಕ್ ಗೆ ಬೆಂಕಿಹಚ್ಚಲು ಯತ್ನಿಸಿದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಸುಳ್ಯದ ರಥಬೀದಿಯಲ್ಲಿರುವ ಸರಸ್ವತಿ ಬ್ಯಾಂಕ್ ಗೆ ನುಗ್ಗಿದ ಸ್ಥಳೀಯ ಪೂರಿ ಅಂಗಡಿ ನಡೆಸುತ್ತಿದ್ದ ಶಿವಣ್ಣ ಗೌಡ ಎಂಬವರು ಈ ರೀತಿ ಮಾಡಲು ಯತ್ನಿಸಿರುವ ವ್ಯಕ್ತಿ ಎನ್ನಲಾಗಿದೆ.
ಶಿವಣ್ಣ ಗೌಡ ರವರು ಫೆ.20 ರಂದು ರಥಬೀದಿಯ ಸರಸ್ವತಿ ಸೌಹಾರ್ದ ಬ್ಯಾಂಕ್ ಗೆ ಬೆಳಿಗ್ಗೆ ಆಗಮಿಸಿದ್ದು, ತಾನು ಪಡೆದಿರುವ ಸಾಲದ ಕಂತಿನ ವಿವರದಲ್ಲಿ ಮಾತುಕಥೆ ನಡೆಸುತ್ತಾ ತಾನು ತಂದಿರುವ ಪೆಟ್ರೋಲ್ ಕ್ಯಾನ್ ನಿಂದ ಪೆಟ್ರೋಲ್ ಚೆಲ್ಲಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದಲ್ಲದೆ, ನೋಡ ನೋಡುತ್ತಿದ್ದಂತೆ ಲೈಟರ್ ನಿಂದ ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಕೂಡಲೇ ಬ್ಯಾಂಕಿನ ಸಿಬ್ಬಂದಿಗಳು ಅವರನ್ನು ತಡೆದು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಿವಣ್ಣ ಗೌಡ ರವರನ್ನು ಅವರ ಸ್ಕೂಟರ್ ಸಮೇತ ಠಾಣೆಗೆ ಕರೆದೊಯ್ಯಿದಿದ್ದು, ಶಿವಣ್ಣ ಗೌಡ ಆಸ್ತಿ ಖರೀದಿಗೆ ಸರಸ್ವತಿ ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದರು. ಹಲವು ಕಂತು ಬಾಕಿಯಾಗಿದ್ದು, ಆಸ್ತಿ ಮುಟ್ಟುಗೋಲು ಹಾಕಲು ತಯಾರಿಯಾಗಿತ್ತು. ಇದರಿಂದ ಬೇಸತ್ತ ಅವರು ಈ ಕೃತ್ಯಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಬ್ಯಾಂಕ್ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ..