ವಿಟ್ಲ-ಕಾಸರಗೋಡು ರಸ್ತೆಯ ಅಡ್ಯನಡ್ಕ ಸಮೀಪದ ಮರಕ್ಕಿನಿಯಲ್ಲಿ ‘MAS TRADERS’ (ಗೃಹ ನಿರ್ಮಾಣ ವಸ್ತುಗಳ ಮಳಿಗೆ ) ನೂತನವಾಗಿ ಶುಭಾರಂಭಗೊಂಡಿತು.

ಬೆಳಿಗ್ಗೆ ಮೀರ್ ಝಹಿದ್ ಅಲ್ ಬುಖಾರಿ ತಂಗಲ್ ಮಂಜೇಶ್ವರ, ಅಡ್ಯನಡ್ಕ ಮುದರಿಸ್ ಹೈದರ್ ದಾರಿಮಿ, ಅಡ್ಯಸ್ಥಳ ಮುದರ್ರಿಸ್ ಅಲ್ ಹಾಜಿ ಅಬ್ದುಲ್ ರಝಕ್ ಮಿಸ್ ಬಾಯಿ ದುವಾ: ಮೂಲಕ ಚಾಲನೆ ನೀಡಿದರು.

ಮಾಲಕರಾದ ಮಹಮ್ಮದ್ ಅಶ್ರಫ್ ಸಂಸ್ಥೆಯ ಬಗ್ಗೆ ಅತಿಥಿಗಳಿಗೆ ವಿವರಿಸಿದರು. ಇಲ್ಲಿ ಗೃಹ ನಿರ್ಮಾಣಕ್ಕೆ ಮತ್ತು ನವೀಕರಣಕ್ಕೆ ಬೇಕಾದ ಎಲ್ಲ ವಸ್ತುಗಳು ಇಲ್ಲಿ ದೊರೆಯಲಿದೆ.

ಉತ್ತಮ ಗುಣಮಟ್ಟ ಮತ್ತು ವೈಶಿಷ್ಟತೆಯನ್ನು ಹೊಂದಿದೆ. ಅಡ್ಯನಡ್ಕ, ಪೆರುವಾಯಿ, ಮಾಣಿಲ, ಕುದ್ದುಪದವು ಮತ್ತು ಕೇರಳ ಗಡಿಭಾಗದ ಜನರು ಮನೆ ನಿರ್ಮಾಣದ ಸಾಮಾಗ್ರಿಗಳಿಗೆ ವಿಟ್ಲ, ಪುತ್ತೂರು ಭಾಗಗಳಿಗೆ ತೆರಳಬೇಕಾಗುವ ಅನಿವಾರ್ಯವಿದ್ದು, ಇದೀಗ ಮರಕ್ಕಿನಿಯಲ್ಲಿ ಸುಸಜ್ಜಿತ ಮಳಿಗೆ ನಿರ್ಮಾಣಗೊಂಡಿದ್ದರಿಂದ ತುಂಬಾ ಪ್ರಯೋಜವಾಗಲಿದೆ ಎಂದರು..