ವಿಟ್ಲ: ಇಡ್ಕಿದು ಗ್ರಾಮದ ಕುಮೇರು ನಿವಾಸಿ ಅರವಿಂದ ಭಾಸ್ಕರ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಲಿಪ್ಪಾಡಿ ನಿವಾಸಿ ಯೋಗೀಶ್ ಎಂಬಾತನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದ ಭಾಸ್ಕರ್ ಬೆಳಗ್ಗೆ ಆಗುವಾಗ ಸಾವನ್ನಪ್ಪಿದ್ದು, ಈ ಬಗ್ಗೆ ಹಲವರು ಅನುಮಾನ ವ್ಯಕ್ತ ಪಡಿಸಿದ್ದರು.
ಮೃತ ಭಾಸ್ಕರ್ ಅವರಿಗೆ ಹಣದ ವ್ಯವಹಾರದಲ್ಲಿ ಯೋಗೀಶ್ ಎಂಬಾತನೊಂದಿಗೆ ವೈಮನಸ್ಸು ಉಂಟಾಗಿದ್ದು, ಈತ ಆಗಾಗ ಭಾಸ್ಕರ್ ರವರ ಮನೆಗೆ ಬಂದು ಹೋಗುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದರು.
ಈ ಪ್ರಕರಣ ಸಂಬಂಧಿಸಿದಂತೆ ಯೋಗೀಶ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ..