ಬಂಟ್ವಾಳ: ನೂತನ ತಹಶೀಲ್ದಾರ್ ಆಗಿ ಎಸ್.ಬಿ.ಕೂಡಲಿಗಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಬಂಟ್ವಾಳ ತಹಶೀಲ್ದಾರ್ ಆಗಿದ್ದ ದಯಾನಂದ ಅವರನ್ನು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾಯಿಸಲಾಗಿದೆ.
ತೆರವಾದ ಸ್ಥಾನಕ್ಕೆ ಅವರ ಬದಲಿಗೆ ಕೂಡಲಗಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಅವರು ಅಧಿಕಾರ ಸ್ವೀಕರಿಸಿದ್ದಾರೆ.