ಮಾಣಿಕ್ಯ ಸೇವಾ ಪಯಣ ಮಾಣಿ ವತಿಯಿಂದ ಮಾ.7 ರಂದು ನಡೆಯುವ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೋತ್ಸವದಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಅನುಮತಿಯೊಂದಿಗೆ ಒಂದು ಅಶಕ್ತ ಕುಟುಂಬಕ್ಕಾಗಿ ಸೇವಾನಿಧಿ ಸಂಗ್ರಹ ನಡೆಯಲಿದೆ.
ಆರ್ಯಾಪು ಗ್ರಾಮದ ಸಂಪ್ಯ ಕರಿಮೊಗರು ನಿವಾಸಿ ಕೂಲಿ ಕಾರ್ಮಿಕರಾದ ಹರೀಶ್ ರವರು ಫೆ. 4 ರಂದು ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ನಡೆದ ದುರ್ಘಟನೆಯಲ್ಲಿ ತನ್ನ ಬಲ ಅಂಗೈಯನ್ನು ಸಂಪೂರ್ಣವಾಗಿ ಕಳೆದುಕೊಂಡಿರುತ್ತಾರೆ.
ಈಗಾಗಲೇ ಚಿಕಿತ್ಸೆಗಾಗಿ ಅಪಾರ ವೆಚ್ಚವಾಗಿದ್ದು, ಅಲ್ಲದೆ ಕೃತಕ ಅಂಗೈಯ ಮರು ಜೋಡಣೆಗೆ ಸುಮಾರು 5 ಲಕ್ಷಕ್ಕಿಂತಲೂ ಹೆಚ್ಚು ಹಣದ ಅವಶ್ಯಕತೆ ಇರುತ್ತದೆ. ಆರ್ಥಿಕವಾಗಿ ಬಡತನದಲ್ಲಿರುವ ಈ ಕುಟುಂಬಕ್ಕೆ ಹರೀಶ್ ಆಧಾರ ಸ್ತಂಭವಾಗಿದ್ದು, ಇವರ ಹಾಗೂ ಕುಟುಂಬದ ಜೀವನಕ್ಕೆ ನೆರವಾಗುವ ನಿಟ್ಟಿನಲ್ಲಿ ಮಾಣಿಕ್ಯ ಸೇವಾ ಪಯಣ ಮಾಣಿ ವತಿಯಿಂದ ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೋತ್ಸವದಲ್ಲಿ ಸೇವಾನಿಧಿ ಸಂಗ್ರಹ ಮಾಡಲಿದ್ದಾರೆ. ದಾನಿಗಳು ಸಹಕರಿಸುವಂತೆ ತಿಳಿಸಿದ್ದಾರೆ..