ವಿಟ್ಲ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜೇಸೀ ಆಂಗ್ಲ ಮಾಧ್ಯಮ ಶಾಲಾ ರಸ್ತೆಯ ಬಳಿ ಶಾಸಕ ಸಂಜೀವ ಮಠಂದೂರು ಒದಗಿಸಿದ ನಗರೋತ್ಥಾನ ಯೋಜನೆಯಲ್ಲಿ ರೂಪಾಯಿ 11 ಲಕ್ಷ ವೆಚ್ಚದ ರಸ್ತೆ ಕಾಕ್ರೀಟೀಕರಣದ ಶಂಕುಸ್ಥಾಪನೆಯನ್ನು ನಿವೃತ್ತ ಶಿಕ್ಷಕ ಮಹಬಲೇಶ್ವರ ಭಟ್ ನೆರವೇರಿಸಿದರು.
ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ, ರಾಮದಾಸ ಶೆಣೈ, ಸುಭಾಶ್ಚಂದ್ರ ನಾಯಕ್, ರಾಧಾಕೃಷ್ಣ ನಾಯಕ್, ರಾಘವೇಂದ್ರ ಪೈ, ಸುದರ್ಶನ್, ನಾಗೇಶ್ ಬಸವನಗುಡಿ, ಗಿರಿಯಪ್ಪ ಗೌಡ, ಸುಧೀರ್ ಪೈ ಮತ್ತಿತರರು ಉಪಸ್ಥಿತರಿದ್ದರು.