ಕಡಬ: ಆಕಸ್ಮಿಕವಾಗಿ ಟ್ಯಾಪಿಂಗ್ ಕತ್ತಿ ಎದೆಗೆ ಹೊಕ್ಕು ಮಹಿಳೆ ಮೃತಪಟ್ಟ ಘಟನೆ ಕಡಬ ತಾಲೂಕಿನ ಎಡಮಂಗಲದಲ್ಲಿ ನಡೆದಿದೆ.
ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ ಎಂಬವರ ಪತ್ನಿ ಗೀತಾ ಟ್ಯಾಪಿಂಗ್ ಕತ್ತಿ ಆಕಸ್ಮಿಕವಾಗಿ ಎದೆಗೆ ಹೊಕ್ಕು ಮೃತಪಟ್ಟ ಮಹಿಳೆ.
ಗೀತಾ ರವರು ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸಮುಗಿಸಿ ಬೆಳಿಗ್ಗೆ ಮನೆಗೆಹಿಂತಿರುಗುವಾಗ ಎಡವಿ ಬಿದ್ದರೆನ್ನಲಾಗಿದೆ. ಬೀಳುವಾಗ ಹರಿತವಾದ ಕತ್ತಿ ಎದೆಯೊಳಗೆ ಹೊಕ್ಕು ಮೃತಪಟ್ಟಿರುವುದಾಗಿ ಮೃತರ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.