ಬೆಳ್ತಂಗಡಿ: ತಾಲೂಕಿನ ತೋಟತ್ತಾಡಿ ಗ್ರಾಮದ ಬೆದ್ರಾಳ ನಿವಾಸಿ ಸುದರ್ಶನ್ @ಹರ್ಷ ರಾಣೆ(36) ರವರನ್ನು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮುಂಡಗೋಡದ ಬಡ್ಡಿಗೇರಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ.
ಸುದರ್ಶನ್ ಗೆ ಮದುವೆಯಾಗಿ ಒಂದು ಮಗು ಕೂಡ ಇದೆ. ಮೂರು ವರ್ಷಗಳಿಂದ ಕುಟುಂಬ ಸಮೇತ ಧಾರವಾಡದಲ್ಲಿ ವಾಸವಾಗಿದ್ದರು. ಇವರಿಗೆ ಮಂಗಳೂರು , ಶಿರಸಿ ಸೇರಿದಂತೆ ಹಲವೆಡೆ ವ್ಯವಹಾರಗಳಿವೆ.
ಈ ಬಗ್ಗೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಕಾರಣ ಏನು ಎಂಬುವುದು ತಿಳಿದು ಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುದರ್ಶನ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು.