ಉತ್ತರಕನ್ನಡ : ಹಳಿಯಾಳ ಪೊಲೀಸ್ ಠಾಣೆಯ ಪಿ.ಎಸ್.ಐ ವಿನೋದ್ ರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮನೆಯಿಂದ ಕಾರು ಕಳವುಗೈದಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಹಳಿಯಾಳ ಸಿದ್ದರಾಮೇಶ್ವರ ಗಲ್ಲಿ ನಿವಾಸಿ ಸಂತೋಷ ಮಲ್ಲೇಶಿ ಬಂಧಿತ ಆರೋಪಿ.

ರಾವಳನಾಥ ಕಡೋಳಕರ ನಿವಾಸಿ ರಾಹುಲ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ರಾಹುಲ ರವರು ತಮ್ಮ ಪತ್ನಿ ತಮ್ಮ ಮಂಜುನಾಥ್ ಬಳಿ ಕಾರನ್ನು ಬಾಡಿಗೆಗೆ ಬಿಟ್ಟಿದ್ದು, ಮಂಜುನಾಥ್ ರವರು ಮನೆಯ ಮುಂದೆ ಕಾರು ನಿಲ್ಲಿಸಿ ಮನೆಯೊಳಗೆ ತೆರಳಿದ್ದ ವೇಳೆ ಕಾರನ್ನು ಕಳವು ಮಾಡಲಾಗಿತ್ತು.
ಬಂಧಿತ ಆರೋಪಿಯಿಂದ 3 ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಿಷ್ಣುವರ್ದನ್ ಎನ್ ಐ.ಪಿ.ಎಸ್, ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ, ಕಾರವಾರ, ಸಿ.ಟಿ ಜಯಕುಮಾರ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಾನಂದ ಕಟಗಿ ಪೊಲೀಸ್ ಉಪಾಧೀಕ್ಷಕರು ದಾಂಡೇಲ ಹಾಗೂ ಸುರೇಶ ಸಿಂಗೆ ಪೊಲೀಸ್ ವೃತ್ತ ನಿರೀಕ್ಷಕರು ಹಲಿಯಾಳ ರವರ ಮಾರ್ಗದರ್ಶನದಲ್ಲಿ, ವಿನೋದ ರೆಡ್ಡಿ . ಪಿ.ಎಸ್.ಐ ಮತ್ತು ಅಮೀನ ಅತ್ತಾರ ಪಿ.ಎಸ್.ಐ (ತನಿಖೆ) ಹಳೀಯಾಳ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಎ.ಎಸ್.ಐ ಸುರೇಶ ಘಾಟಗೆ, ಸಿ.ಎಚ್.ಸಿ ಇಸ್ಮಾಯಿಲ್ ಕೋಣನಕೇರಿ, ಸಿ.ಎಚ್.ಸಿ ಎಮ್.ಎಮ್. ಮುಲ್ಲಾ, ಸಿಪಿಸಿ ಶ್ರೀಶೈಲ ಜಿ.ಎಮ್, ಸಿಪಿಸಿ ಕುಬೇರ ಹೊಸುರ, ಸಿಪಿಸಿ ಸೊಹೇಲ್ ನಾಗನೂರ ಹಾಗೂ ಸಿಪಿಸಿ ಉಮೆಶ ಹನಗಂಡಿ, ಆರೋಪಿತನನ್ನು ದಸ್ತಗಿರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಕಾರವಾರ ರವರು ಶ್ಲಾಘಿಸಿದ್ದು, ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.



























