ವಿಟ್ಲ : ಇಡ್ಕಿದು ಕುಳ ಪಂಚಾಯತಿನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕುಳ ಗ್ರಾಮದ ಮೋಹಿನಿ ಜಯಕರ್ ಅಧ್ಯಕ್ಷರಾಗಿ, ಇಡ್ಕಿದು ಗ್ರಾಮದ ಪದ್ಮನಾಭ ಸಪಲ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಬಿಜೆಪಿ ಮಂಡಲದ ಉಪಾಧ್ಯಕ್ಷರು ಪುಣಚ ಮಹಾಶಕ್ತೀ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್ ಪಕ್ಷದ ಹಿರಿಯರ ಸಮ್ಮುಖದಲ್ಲಿ ಹೆಸರುಗಳನ್ನು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ಮಂಡಲ ಪ್ರ.ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.
ಪಂಚಾಯತಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಬಂಟ್ವಾಳ ತಾಲೂಕು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯಾದ ಪ್ರೀತಮ್ ರವರು ಇಡ್ಕಿದು ಕುಳ ಪಂಚಾಯತಿಗೆ ಅಧ್ಯಕ್ಷ ಉಪಾಧ್ಯಕ್ಷ ರವರ ಆಯ್ಕೆ ಪ್ರಕ್ರಿಯೆಯನ್ನು ಅಧಿಕೃತವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು ಆಗಮಿಸಿ ಶುಭಹಾರೈಕೆ ಮಾಡಿದರು. ಪಂಚಾಯತು ಅಭಿವೃದ್ಧಿ ಅಧಿಕಾರಿ ರಾಧಕೃಷ್ಣ ಭಕ್ತ, ಮಂಡಲ ಪ್ರ.ಕಾರ್ಯದರ್ಶಿ ನಿತೀಶ್ ಶಾಂತಿವನ, ಹರೀಶ್ ಬಿಜತ್ರೆ, ಪಕ್ಷದ ಪ್ರಮುಖರಾದ ಸುರೇಶ್ ಭಟ್, ರಮೇಶ್ ಭಟ್, ರಾಜರಾಮ ಶೆಟ್ಟಿ, ಪ್ರಪುಲ್ ಚಂದ್ರ, ಶಕ್ತೀ ಕೇಂದ್ರ ಸಂಚಾಲಕರಾದ ಸುಧೀರ್ ಕುಮಾರ್ ಶೆಟ್ಟಿ, ಚಿದಾನಂದ ಪೆಲತ್ತಿಂಜ, ಪಂಚಾಯತು ಸದಸ್ಯರುಗಳು ಉಪಸ್ಥಿತರಿದ್ದರು.
