ಬೆಂಗಳೂರು : ನಟ ವಿಜಯ ರಾಘವೇಂದ್ರ ರವರ ಪತ್ನಿ ಸ್ಪಂದನಾ ವಿಜಯ ರಾಘವೇಂದ್ರ ರವರು ವಿಧಿವಶರಾಗಿದ್ದು, ಶಾಸಕ ಹರೀಶ್ ಪೂಂಜಾ ಬೆಂಗಳೂರಿನಲ್ಲಿ ಸ್ಪಂದನಾ ರವರ ಪಾರ್ಥಿವ ಶರೀರದ ದರ್ಶನ ಮಾಡಿದರು.

ಈ ವೇಳೆ ಸ್ಪಂದನಾ ಸಹೋದರ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಿತ್ ಶಿವರಾಂ ರವರನ್ನು ಬಿಗಿದಪ್ಪಿ ಸಂತೈಸಿದರು.
ಹರೀಶ್ ಪೂಂಜಾ ರಕ್ಷಿತ್ ಶಿವರಾಂ ಕುಟುಂಬಸ್ಥರಿಗೂ ಧೈರ್ಯ ತುಂಬಿದರು. ಸ್ಪಂದನಾ ಪತಿ ವಿಜಯರಾಘವೇಂದ್ರ ರನ್ನು ಬಿಗಿದಪ್ಪಿ ಸಂತೈಸುವ ಜೊತೆಗೆ ಸ್ಪಂದನಾ ಮಾವ ಬೆಳ್ತಂಗಡಿಯವರಾದ ಪಿತಾಂಬರ ಹೆರಾಜೆಯವರಿಗೂ ಧೈರ್ಯ ತುಂಬಿದರು.