ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ನ 2ನೇ ಅವಧಿಯ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಜಿ.ಎಂ. ಇಬ್ರಾಹಿಂ ಮತ್ತು ಉಪಾಧ್ಯಕ್ಷರಾಗಿ ಗೀತಾ ಆಯ್ಕೆಯಾಗಿದ್ದಾರೆ.
21 ಸದಸ್ಯ ಬಲದ ಮಂಚಿ ಗ್ರಾಮ ಪಂ.ಕಛೇರಿಯಲ್ಲಿ ಆ.11 ರಂದು ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಿ.ಎಂ.ಇಬ್ರಾಹಿಂ ಅವರು 12 ಮತ ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಮೋಹನದಾಸ ಶೆಟ್ಟಿ 9 ಮತ ಪಡೆದಿದ್ದಾರೆ. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಗೀತಾ ಅವರು 11 ಮತ ಪಡೆದಿದ್ದರೆ, ಬಿಜೆಪಿ ಬೆಂಬಲಿತ ವಿಜಯ ನಾಯ್ಕ್ 10 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಶಿವಪ್ರಸನ್ನ ಚುನಾವಣಾ ಪ್ರಕ್ರಿಯೆ ನಡೆಸಿದ್ದು, ಪಿಡಿಒ ನಿರ್ಮಲ ಸಹಕರಿಸಿದರು.