ಪುತ್ತೂರು : 2012ರಲ್ಲಿ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಪುತ್ತೂರಿನಲ್ಲಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪಾದಯಾತ್ರೆ ಹಾಗೂ ರಸ್ತೆ ತಡೆ ನಡೆಯಲಿದೆ.

ಈ ಹೋರಾಟಕ್ಕೆ ಸೌಜನ್ಯ ತಾಯಿ ಕುಸುಮಾವತಿಯವರನ್ನು ಪುತ್ತಿಲ ಪರಿವಾರದ ವತಿಯಿಂದ ಆಹ್ವಾನಿಸಿದರು.
ಸೌಜನ್ಯ ಸಮಾಧಿ ಬಳಿ ಪ್ರಾರ್ಥನೆ ಸಲ್ಲಿಸಿ, ತಾಯಿಗೆ ಮೊದಲ ಆಮಂತ್ರಣ ನೀಡಲಾಯಿತು.
ತಾಯಿ ಕುಸುಮಾವತಿ ಅವರ ಬಳಿ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

2013ರಲ್ಲೂ ಅರುಣ್ ಕುಮಾರ್ ಪುತ್ತಿಲರು ಹೋರಾಟ ನಡೆಸಿದ್ದಾರೆ. ಈಗ ಮರುತನಿಖೆಗೆ ಆಗ್ರಹಿಸಿ ಪುತ್ತೂರಿನಲ್ಲಿ ಹೋರಾಟ ನಡೆಸಲಿದ್ದೇವೆ. ಈ ಹೋರಾಟದ ಮೊದಲ ಆಮಂತ್ರಣ ನಿಮಗೆ ನೀಡಿ ಆಮಂತ್ರಿಸುತ್ತಿದ್ದೇವೆ ಎಂದರು.
ಈ ಸಂದರ್ಭ ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಮನೀಶ್ , ಶನ್ಮಿತ್ ರೈ, ಶರತ್ ಎನ್.ಎಸ್ ವಿಟ್ಲ ಮೊದಲಾದವರು ಹಾಜರಿದ್ದರು.
ಆ.14 ರಂದು ಬೆಳಿಗ್ಗೆ 9.30 ರಿಂದ ದರ್ಬೆಯಿಂದ ಬಸ್ ನಿಲ್ದಾಣದವರೆಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ.
10 ಗಂಟೆಯಿಂದ 11 ಗಂಟೆಯವರೆಗೆ ಪುತ್ತೂರಿನ ಅಂಗಡಿ ಮಾಲೀಕರು 1 ಗಂಟೆ ಸ್ವಯಂಪ್ರೇರಿತ ಬಂದ್ ನಡೆಸಿ ಸೌಜನ್ಯಾ ಪ್ರಕರಣದ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸುವಂತೆ ಕೇಳಲಾಗಿದೆ.