ವಿಟ್ಲ : ಭಾರೀ ಮಳೆಯಲ್ಲಿಯೂ ವಿಟ್ಲ ಪೇಟೆಯಲ್ಲಿ ಖದೀಮರು ತಮ್ಮ ಕೈಚಳಕ ತೋರಿದ್ದಾರೆ.
ವಿಟ್ಲ ಪೇಟೆಯ ಮೂರು ಕಡೆ ನಿನ್ನೆ ತಡರಾತ್ರಿ ಕಳ್ಳತನ ನಡೆದಿದೆ.

ಬೊಬ್ಬೆಕೇರಿಯ ಕಾವೇರಿ ಬಾರ್, ಮೇಗಿನಪೇಟೆಯ ಬಿಗ್ ಬೇಕ್ಸ್, ಮಂಗಿಲಪದವಿನಲ್ಲಿರುವ ಅಂಗಡಿಯಲ್ಲಿ ಕಳ್ಳತನ ನಡೆದಿದೆ.
ಕಾವೇರಿ ಬಾರ್ ನಲ್ಲಿ ಸುಮಾರು 40,000 ರೂ. ನಗದು, ಸ್ಪೀಕರ್, ಮದ್ಯದ ಬಾಟಲಿಗಳನ್ನು ಖದೀಮರು ಕದ್ದೊಯ್ಯಿದಿದ್ದಾರೆ.
ಮೇಗಿನಪೇಟೆಯ ಬಿಗ್ ಬೇಕ್ಸ್ ಬೇಕರಿಯಲ್ಲಿ ಹರಕೆ ಡಬ್ಬಿ, ಚಾಕಲೇಟ್, ಮೊಬೈಲ್, ನಗದು ದೋಚಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.