ವಿಟ್ಲ ಮೂಲದ ವಿವಾಹಿತ ಮಹಿಳೆಯೋರ್ವರು ಅನಾರೋಗ್ಯದಿಂದ ನಿಧನರಾದ ಘಟನೆ ನಡೆದಿದೆ.
ಮೂಲತಃ ವಿಟ್ಲ ಕೂಜಪ್ಪಾಡಿ ನಿವಾಸಿ, ಕಟೀಲು ಎಕ್ಕಾರು ಅಶೋಕ್ ಶೆಟ್ಟಿ ರವರ ಪತ್ನಿ ಅರ್ಚನಾ ಶೆಟ್ಟಿ (37) ಮೃತ ಮಹಿಳೆ.

ಅರ್ಚನಾ ರವರು ಕೆಲ ಸಮಯದಿಂದ ಅನಾರೋಗ್ಯದಿಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾದರು.
ಮೃತರು ಪತಿ, ಇಬ್ಬರು ಮಕ್ಕಳು, ಮನೆಯವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.