ವಿಟ್ಲ : ವಿಶ್ವಹಿಂದೂ ಪರಿಷದ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಇದರ ವತಿಯಿಂದ 8ನೇ ವರುಷದ ಗೋಪೂಜಾ ಕಾರ್ಯಕ್ರಮವು ಪೆರುವಾಯಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಜರುಗಿತು.

ಭಜನಾ ಕಾರ್ಯಕ್ರಮದಿಂದ ಉದ್ಘಾಟನೆಗೊಂಡು ಬಳಿಕ ಶ್ರೀ ಗೋಪಾಲಕೃಷ್ಣ ದೇವರಿಗೆ ಕಾರ್ತಿಕ ಪೂಜೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದ ಪ್ರಮುಖ ಘಟ್ಟವಾಗಿ ಗೋಮಾತೆಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಮಾತೆಯರು ಪೂಜೆಯನ್ನು ಸಲ್ಲಿಸಿ ಗೋಮಾತೆಯ ಆಶೀರ್ವಾದವನ್ನು ಪಡೆದರು.

ಸಭಾ ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿದ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆಯ ಕಾರ್ಯದರ್ಶಿ ನವೀನ್ ನೆರಿಯ ದೇಸಿ ತಳಿಯ ಗೋವಿನ ಮಹತ್ವವನ್ನು ಮತ್ತು ಹಿಂದೂ ಧರ್ಮದ ಸಂಸ್ಕೃತಿ ಆಚಾರ ವಿಚಾರಗಳ ರಕ್ಷಣೆಯ ಕುರಿತು ತಿಳಿಸಿಕೊಟ್ಟರು. ಬಜರಂಗದಳ ವಿಟ್ಲ ಪ್ರಖಂಡದ ಸಂಚಾಲಕ ಚೇತನ್ ಕಡಂಬು ಹಿತನುಡಿಗಳನ್ನಾಡಿದರು.
ವಿಶ್ವಹಿಂದೂ ಪರಿಷತ್ ಪೆರುವಾಯಿ ಘಟಕದ ಗೌರವಾಧ್ಯಕ್ಷ ಮಂಜುನಾಥ ಆಚಾರ್ಯ ,ವಿಶ್ವಹಿಂದೂ ಪರಿಷತ್ ಪೆರುವಾಯಿ ಘಟಕದ ಅಧ್ಯಕ್ಷ ಶೇಖರ ಪೂಜಾರಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ,ಬಜರಂಗದಳ ಪೆರುವಾಯಿ ಘಟಕದ ಸಂಚಾಲಕ ವಿನೀತ್ ಶೆಟ್ಟಿ ಕಾನ ಪೆರುವಾಯಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪೆರುವಾಯಿ ಗ್ರಾಮದ ಅಂಗನವಾಡಿಯಲ್ಲಿ ಅನೇಕ ವರುಷಗಳಿಂದ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾದ ಸಮಾಜ ಮಂದಿರ ಅಂಗನವಾಡಿ ಸಹಾಯಕಿ ಕಡೆಂಬಿಲ ನಿವಾಸಿ ಇಂದಿರಾ ನಾಯ್ಕ,ಕಡೆಂಬಿಲ ಅಂಗನವಾಡಿ ಕೇಂದ್ರದ ಸಹಾಯಕಿ ಬೆರಿಪದವು ನಿವಾಸಿ ಪುಷ್ಪಾವತಿ, ಕಡೆಂಗೋಡ್ಲು ಅಂಗನವಾಡಿ ಸಹಾಯಕಿ ಕಡೆಂಗೋಡ್ಲು ನಿವಾಸಿ ನಳಿನಿ ಹಾಗೂ ಎಸ್..ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಯಾದ ಅಶ್ವಥನಗರ ನಿವಾಸಿ ಕೆ ಉದಯಕುಮಾರ್ ಭಟ್ ಹಾಗೂ ರಶ್ಮಿ ಜಿ ದಂಪತಿಗಳ ಪುತ್ರ ಶ್ರೇಯಸ್ ಭಟ್ ಯು ರನ್ನು ಸನ್ಮಾನಿಸಲಾಯಿತು.
ವರ್ಷಿತಾ ಅಶ್ವಥನಗರ ಪ್ರಾರ್ಥಿಸಿದರು. ವಿಶ್ವಹಿಂದೂ ಪರಿಷತ್ ಪೆರುವಾಯಿ ಘಟಕದ ಕಾರ್ಯದರ್ಶಿಗಳಾದ ಮೋಕ್ಷಿತ್ ಪೆರುವಾಯಿ ಸ್ವಾಗತಿಸಿದರು. ಸಂಘಟನೆಯ ಪ್ರಮುಖರಾದ ಯತೀಶ್ ಪೆರುವಾಯಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಶ್ವಿನಿ ಪೆರುವಾಯಿ ವೈಯಕ್ತಿಕ ಗೀತೆಯನ್ನು ಹಾಡಿದರು.
ವಿಕಾಸ್ ರಾಜ್ ಪೆರುವಾಯಿ ಧನ್ಯವಾದ ಸಮರ್ಪನೆಯನ್ನು ಮಾಡಿದರು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಧಾರ್ಮಿಕ ಮುಂದಾಳು ನಾಗೇಶ್ ಮಾಸ್ಟರ್ ಕೊಳ್ಳತ್ತಡ್ಕ ನಡೆಸಿಕೊಟ್ಟರು. ಹನುಮಾನ್ ನಾಸಿಕ್ ಪೆರುವಾಯಿ ನಾಸಿಕ್ ಬ್ಯಾಂಡ್ ಪ್ರದರ್ಶನ ಮತ್ತು ಸಿಡಿಮದ್ದು ಪ್ರದರ್ಶನಗಳು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.