ವಿಟ್ಲ : ಅಕ್ರಮವಾಗಿ ಮರಳನ್ನು ಶೇಖರಿಸಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದೇಶ್ ಭಂಡಾರಿ, ಷರೀಫ್, ನಾರಾಯಣ ಪೂಜಾರಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಟ್ಲ ಪೊಲೀಸ್ ಠಾಣಾ ಪೊಲೀಸ್ ಉಪ-ನಿರೀಕ್ಷಕರು ಹಾಗೂ ಸಿಬ್ಬಂದಿಗಳ ತಂಡ, ಡಿ.5 ರಂದು ಸಂಜೆ ಬಂಟ್ವಾಳ ತಾಲೂಕು, ಸಾಲೆತ್ತೂರು ಗ್ರಾಮದ ಬೊಳ್ಮಾರು ನಿವಾಸಿ ಸುದೇಶ್ ಭಂಡಾರಿ ಎಂಬವರ ಜಾಗದಲ್ಲಿ, ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಅಕ್ರಮವಾಗಿ ಶೇಖರಿಸಿರುವ, ಅಂದಾಜು 1.25 ಲಕ್ಷ ಮೌಲ್ಯದ ಸುಮಾರು 20 ರಿಂದ 25 ಲೋಡ್ ಮರಳನ್ನು ಪತ್ತೆಹಚ್ಚಿರುತ್ತಾರೆ.
ಸದ್ರಿ ಮರಳನ್ನು ಅಕ್ರಮವಾಗಿ ಶೇಖರಣೆ ಮಾಡಿರುವ ಸುದೇಶ್ ಭಂಡಾರಿ, ಷರೀಪ್ ಮತ್ತು ನಾರಾಯಣ ಪೂಜಾರಿ ರವರ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 203/2023 ಕಲಂ: 379 R/W 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.