ಹರಿಯಾಣದ ಬಹದುರ್ಗಢ್ನಲ್ಲಿ ಲೀವಿಂಗ್ ರಿಲೇಷನ್ಶಿಪ್ನಲ್ಲಿದ್ದ ಜೋಡಿಯೊಂದು 7 ಅಂತಸ್ತಿನ ಕಟ್ಟಡದಿಂದ ಜಿಗಿದು ಪ್ರಾಣ ಕಳೆದುಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗರ್ವಿತ್ (25), ನಂದಿನಿ (22) ಜೀವ ಕಳೆದುಕೊಂಡ ಪ್ರೇಮಿಗಳು.
ಗರ್ವಿತ್, ನಂದಿನಿ ಪರಸ್ಪರ ಪ್ರೀತಿಸುತ್ತಿದ್ದರು, ಯೂಟ್ಯೂಬ್ ಹಾಗೂ ಫೇಸ್ಬುಕ್ಗೆ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಇವರ ಡೆಹ್ರಾಡೂನ್ನಿಂದ ಬಹದುರ್ಗಢ್ಗೆ ಬಂದಿದ್ದರು. ಇವರ ಜೊತೆಗೆ ಅವರ ತಂಡ ಕೂಡ ಬಂದಿತ್ತು.
ಒಂದು ದಿನ ಗರ್ವಿತ್ ಮತ್ತು ನಂದಿನಿ ಶೂಟ್ ಮುಗಿಸಿಕೊಂಡು ಮನೆಗೆ ಲೇಟ್ ಆಗಿ ಬಂದಿದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇಬ್ಬರು ಮಾತಿಗೆ ಮಾತು ಬೆಳಸಿ ಬಿಲ್ಡಿಂಗ್ನಿಂದ ಜಿಗಿದಿದ್ದಾರೆ ಎಂದು ತಿಳಿಸಿದ್ದಾರೆ.
ತನಿಖೆಯನ್ನು ಮುಂದುವರಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸ್ತಿದ್ದಾರೆ.