ಕಾರು ಖರೀದಿಸೋ ಪ್ಲಾನ್ ಇದೆಯಾ? ಐಷಾರಾಮಿ ಕಾರು ಖರೀದಿಯೋ ಯೋಚನೆ ಇದೆಯಾ? ಅದರಲ್ಲೂ ಕಡಿಮೆ ಬೆಲೆಗೆ ಐಷಾರಾಮಿ ಕಾರು ಮನೆಗೆ ಕೊಂಡೊಯ್ಯಲು ಬಯಸುತ್ತಿದ್ದೀರಾ?. ಕಿಂಗ್ಫಿಶರ್ ಏರ್ಲೈನ್ಸ್ನ ಮಾಜಿ ಮಾಲಕ ವಿಜಯ್ ಮಲ್ಯರವರ ಕಾರೊಂದು ಮಾರಾಟಕ್ಕಿದೆ.
ಮರ್ಸಿಡಿಸ್ ಮೇಬ್ಯಾಕ್ 62 ಕಾರನ್ನು ಮಾರಾಟಕ್ಕೆ ಇರಿಸಲಾಗಿದೆ. ಇದು ಕಿಂಗ್ಫಿಶರ್ ಏರ್ಲೈನ್ಸ್ನ ಮಾಜಿ ಮಾಲಕ ವಿಜಯ್ ಮಲ್ಯರವರಿಗೆ ಸೇರಿದ್ದಾಗಿದೆ. ಅಲ್ಟ್ರಾ ಐಷಾರಾಮಿ ಸೆಡಾನ್ ಕಾರೆಂದೇ ಇದು ಗುರುತಿಸಿಕೊಂಡಿದೆ.
ವಿಜಯ್ ಮಲ್ಯ 2009ರಲ್ಲಿ ಈ ಕಾರು ಖರೀದಿಸಿದ್ದಾರೆ. ಆದರೆ ಮರ್ಸಿಡಿಸ್ ಕಂಪನಿ 2013ರಲ್ಲಿ ಈ ಮಾಡೆಲ್ನ ಉತ್ಪಾದನೆ ಸ್ಥಗಿತ ಮಾಡಿದೆ. ಸದ್ಯ ವಿಜಯ್ ಮಲ್ಯರವರ ಮೇಬ್ಯಾಕ್ 62 ಹೆಸರಿನ ಕಾರು ಮಾರಾಟಕ್ಕಿದ್ದು, 2.49 ಕೋಟಿಗೆ ಸೇಲ್ ಮಾಡಲಾಗುತ್ತಿದೆ.
ಈ ಕಾರಿನ ನಂಬರ್ ವಿಶೇಷವಾಗಿದೆ. ‘9999’ ವಿಐಪಿ ನೋಂದಣಿಯ ಕಾರು ಇದಾಗಿದೆ. ಪಾಂಡಿಚೇರಿಯಲ್ಲಿ ನೋಂದಾಯಿಸಲ್ಪಟ್ಟಿದೆ. ಕಪ್ಪು ಮತ್ತು ಚಿನ್ನದ ಡ್ಯುಯೆಲ್ ಟೋನ್ ಶೇಡ್ನಲ್ಲಿದೆ.
ಮರ್ಸಿಡಿಸ್ ಮೇಬ್ಯಾಕ್ 62 ಕಾರಿನ ಪೂರ್ತಿ ಬಣ್ಣ ಕಪ್ಪು ಆಗಿದೆ. ಆದರೆ ಕಾರಿನ ಸೈಡ್ ಪ್ಯಾನೆಲ್ಗಳ ಗೋಲ್ಡ್ ಬಣ್ಣದ ದೊಡ್ಡ ಪಟ್ಟಿಯಿದೆ. ವಿಜಯ ಮಲ್ಯರವರು ಈ ಕಾರನ್ನು 2004ರಲ್ಲಿ ತರಿಸಿದ್ದರು. ಆದ್ರೆ 2009ರಲ್ಲಿ ನೋಂದಾಯಿಸಿದರು.
ಮೇಬ್ಯಾಕ್ 62 ಕಾರು ಒಟ್ಟು 33,971 ಕಿಮೀ ಮಾತ್ರ ಚಲಿಸಿದೆ. ಇನ್ನು ಈ ಕಾರಿನಲ್ಲಿ 5.5 ಲೀಟರ್ ಟ್ವಿನ್ ಟರ್ಬೋ ಚಾರ್ಜರ್ ಹೊಂದಿದ್ದು, ವಿ12 ಪೆಟ್ರೋಲ್ ಎಂಜಿನ್ ಹೊಂದಿದೆ. 543ಬಿಹೆಚ್ಪಿ ಎಂಜಿನ್ ಮತ್ತು 900 ಎನ್ಎಮ್ ಟಾರ್ಕ್ ಉತ್ಪಾದಿಸುತ್ತದೆ. ಐದು ಗೇರ್ನಿಂದ ಕೂಡಿರುವ ಮೇಬ್ಯಾಕ್ 62 ಕಾರು 6.2 ಮೀಟರ್ನಷ್ಟು ಉದ್ದವಿದೆ.