ಉಪ್ಪಿನಂಗಡಿ : ವ್ಯಕ್ತಿಯೋರ್ವರಿಗೆ ತಂಡವೊಂದು ಹಲ್ಲೆ ನಡೆಸಿರುವ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಣಿಯೂರು ನಿವಾಸಿ ಪ್ರವೀಣ (26) ಎಂಬವರು ನೀಡಿದ ದೂರಿನ ಮೇರೆಗೆ ರಾಧಕೃಷ್ಣ, ಪ್ರಜ್ವಲ್, ಕಿರಣ್ ಶಿಶಿಲ, ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಜು.28 ರಂದು ಮಧ್ಯಾಹ್ನ ಪ್ರವೀಣ್ ಅವರ ಅಂಗಡಿಯ ಹೊರಗೆ ಸಿಟೌಟ್ನಲ್ಲಿ ಕುಳಿತಿದ್ದಾಗ, ಅಲ್ಲಿಗೆ ಮಾರುತಿ ಶಿಫ್ಟ್ ಕಾರಿನಲ್ಲಿ ಪರಿಚಯದ ರಾಧಕೃಷ್ಣ, ಪ್ರಜ್ವಲ್, ಕಿರಣ್ ಶಿಶಿಲ ಹಾಗೂ ಪರಿಚಯವಿಲ್ಲದ 5 ಜನರು ಬಂದಿದ್ದು, ಪ್ರಜ್ವಲ್ ಅವಾಚ್ಯ ಶಬ್ದಗಳಿಂದ ಬೈದಿದ್ದು, ಮತ್ತೋರ್ವ ಕಿರಣ್ ಎಂಬಾತ ಆತನ ಕೈಯಲ್ಲಿದ್ದ ಕಬ್ಬಿಣದ ಕ್ರಾಂಕೇಟ್ ರಾಡ್ನಿಂದ ಪ್ರವೀಣ್ ಗೆ ಹಲ್ಲೆ ನಡೆಸಿರುತ್ತಾನೆ. ಆತನೊಂದಿಗೆ ಪ್ರಜ್ವಲ್,ರಾಧಕೃಷ್ಣ ಮತ್ತು ಅವರ ಜೊತೆಯಲ್ಲಿ ಬಂದಿದ್ದ ಇನ್ನಿಬ್ಬರು ಕೈಗಗಳಿಂದ ಹಲ್ಲೆ ಮಾಡಿರುತ್ತಾರೆ. ಬಳಿಕ ಜೀವಬೆದರಿಕೆಯೊಡ್ಡಿ ತೆರಳಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 88/2024 ಕಲಂ: 189(2),191(2),191(3),352,115(2),118(1),329(4) 351(2) ಜೊತೆಗೆ 190 BNS 2023 ರಂತೆ ಪ್ರಕರಣ ದಾಖಲಾಗಿದೆ.