ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ ಫೀಡರ್‌ನಲ್ಲಿ ನ.28 ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಕೆಎಸ್‌ಆರ್‌ಟಿಸಿ, ಟ್ಯಾಕ್ಸಿ ಸ್ಟಾಂಡ್, ದೇವಣ್ಣಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್ಸ್ ಸಿಟಿ ಸೆಂಟರ್, ಚಿಕ್ಕಪುತ್ತೂರು ಮತ್ತು ಮಡಿವಾಳಕಟ್ಟೆ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.