ಬೆಳಾಲು: ಇಲ್ಲಿಯ ಕೊಡೋಳುಕೆರೆ ಎಂಬಲ್ಲಿ ನಾಲ್ಕು ತಿಂಗಳ ಹೆಣ್ಣುಮಗುವನ್ನು ಕಾಡಿನ ಮಧ್ಯೆ ಬಿಟ್ಟು ಹೋದ ಘಟನೆ ಇಂದು(ಮಾ.22) ಬೆಳಗ್ಗೆ ನಡೆದಿದೆ.
ಬೆಳಾಲು ಗ್ರಾ.ಪಂ ವ್ಯಾಪ್ತಿಯ ಮುಂಡ್ರೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನಲ್ಲಿ ಮಗುವೊಂದು ಅಳುವ ಶಬ್ಧ ದಾರಿಹೋಕ ಮಹಿಳೆಗೆ ಕೇಳಿದ್ದು ತಕ್ಷಣ ಅವರು ಮಗುವನ್ನು ಕಂಡು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ. ಹಸುಕೂಸು ಆರೋಗ್ಯಕರವಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆ ದೌಡಾಯಿಸಿದ್ದು ಮಹಿಳಾ ಮತ್ತು ಮಕ್ಕಳ ಇಲಾಖಾ ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂದು ಬೆಳಾಲು ಗ್ರಾ.ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.