ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿವಿಧ ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆದು ವಾಹನಗಳ ತಪಾಸಣೆ ಮತ್ತು ಟಿಂಟ್ ಗ್ಲಾಸ್ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸದ್ಯ ಈ ವರೆಗೆ ಸುಮಾರು 504 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಒಟ್ಟು 2,53,000 ರೂ. ದಂಡ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ವಾಹನಗಳ ಚಾಲಕರಿಂದ ಟಿಂಟ್ ಗ್ಲಾಸ್, ಬ್ಲಾಕ್ ಫಿಲಂ ಸ್ಟಿಕ್ಕರ್ ಗಳನ್ನು ತೆಗೆಸಲಾಗಿದ್ದು ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಮುಂದುವರಿಯಲಿದ್ದು ವಾಹನ ಸವಾರರು ಇಂತಹ ಸ್ಟಿಕ್ಕರ್ ಟಿಂಟ್ ಗಳನ್ನು ಅಳವಡಿಸದಂತೆ ಮಂಗಳೂರುನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.