ಪುತ್ತೂರು:ಮೊಟ್ಟೆತ್ತಡ್ಕ ದಿ.ಕಾರ್ಮಿನ್ ಡಿ’ಸೋಜರವರ ಪತಿ ಸಾಲ್ವದೊರ್ ಡಿ’ಸೋಜ(80ವ.) ರವರು ಅನಾರೋಗ್ಯದಿಂದ ಜೂ.27 ರಂದು ಬೆಳಿಗ್ಗೆ ಮೊಟ್ಟೆತ್ತಡ್ಕ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪುತ್ರ ಸ್ನೇಹಸಂಗಮ ಆಟೋ ರಿಕ್ಷಾ ಯೂನಿಯನ್ ನಿಕಟಪೂರ್ವ ಅಧ್ಯಕ್ಷ ಸಿಲ್ವೆಸ್ತರ್ ಡಿ’ಸೋಜ, ಪುತ್ರಿಯರಾದ ಸಾಂತಿನ್ ಡಿ’ಸೋಜ, ಸೊಬಿನ್ ಡಿ’ಸೋಜ, ಆಂಜಲಿನ್ ಡಿ’ಸೋಜ, ಫಿಲೋಮಿನಾ ಡಿ’ಸೋಜರವರನ್ನು ಅಗಲಿದ್ದಾರೆ. ಮೃತರ ಮನೆಗೆ ಸ್ನೇಹಸಂಗಮ ಆಟೋರಿಕ್ಷಾ ಯೂನಿಯನ್ ಗೌರವಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ನವೀನ್ ಚಂದ್ರ ನಾಯೈಕ್ ಬೆದ್ರಾಳ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ನಗರಸಭಾ ಸದಸ್ಯೆ ಶೈಲಾ ಪೈ, ಉದ್ಯಮಿ ರಫೀಕ್ ಎಂ.ಕೆ, ಸುರೇಂದ್ರ ಎ.ಮೊಟ್ಟೆತ್ತಡ್ಕ, ಸ್ನೇಹಸಂಗಮ ಆಟೋ ರಿಕ್ಷಾ ಚಾಲಕರು, ಮೊಟ್ಟೆತ್ತಡ್ಕ ವಾಳೆಯ ಗುರಿಕಾರಿಣಿ ಲವೀನಾ ಪಸನ್ನ, ಮಾಜಿ ಗುರಿಕಾರ ಜೆರೋಮ್ ಮಸ್ಕರೇನ್ಹಸ್ ಮತ್ತೀತರರು ಆಗಮಿಸಿ ಸಾಂತ್ವನ ನುಡಿದಿದ್ದಾರೆ.