ಬೆಳ್ತಂಗಡಿ: ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ (ಡಿಸ್ಟಿಂಕ್ಷನ್)ಯಲ್ಲಿ ಉತ್ತೀರ್ಣರಾದ ಬೆಳ್ತಂಗಡಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ “ಶ್ರಮಿಕ ಪ್ರತಿಭಾ ವಿದ್ಯಾರ್ಥಿ ಸನ್ಮಾನ ಕಾರ್ಯಕ್ರಮ”ವನ್ನು ಜೂನ್ 28, 2026 (ಭಾನುವಾರ) ಆಯೋಜಿಸಲಾಗಿದೆ.
ಕಾರ್ಯಕ್ರಮವು ಮೂರು ಕೇಂದ್ರಗಳಲ್ಲಿ ನಡೆಯಲಿದ್ದು, ಬೆಳಿಗ್ಗೆ 9.00 ಗಂಟೆಗೆ ಅಳದಂಗಡಿಯ ಸ್ವರಾಜ್ ಟವರ್ಸ್ನಲ್ಲಿ ಅಳದಂಗಡಿ ಹಾಗೂ ನಾರಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಲಿದೆ.
ಬೆಳಿಗ್ಗೆ 11.00 ಗಂಟೆಗೆ ಬೆಳ್ತಂಗಡಿಯ ಸಂಗಮ ಸಭಾಭವನದಲ್ಲಿ ಕಣಿಯೂರು, ಕುವೆಟ್ಟು ಜಿಲ್ಲಾ ಪಂಚಾಯತ್ ವ್ಯಾಪ್ತಿ ಹಾಗೂ ಬೆಳ್ತಂಗಡಿ ನಗರ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಮಧ್ಯಾಹ್ನ 2.00 ಗಂಟೆಗೆ ಉಜಿರೆಯ ಅನುಗ್ರಹ ಸಭಾಭವನದಲ್ಲಿ ಧರ್ಮಸ್ಥಳ, ಲಾಯಿಲ ಹಾಗೂ ಉಜಿರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ಮಾರ್ಗದರ್ಶನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರಮಿಕ ಸೇವಾ ಟ್ರಸ್ಟ್ ಮನವಿ ಮಾಡಿದೆ. ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಲಾಗಿದೆ.



























