ಬೆಳ್ತಂಗಡಿ: ಬೆಲಾಲು ಗ್ರಾಮದ ಕೂಡೋಳುಕೆರೆ–ಮುಂಡೋಟ್ಟು ರಸ್ತೆಯಲ್ಲಿ ಶುಕ್ರವಾರ ಬೊಲೆರೊ ವಾಹನದ ಮೇಲೆ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.
ಮರ ಬಿದ್ದ ರಭಸಕ್ಕೆ ವಾಹನ ಹಾನಿಗೊಂಡಿದ್ದು, ಚಾಲಕ ಪಾಲಡ್ಕದ ಚಿದಾನಂದ ಅವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ವಿದ್ಯುತ್ ಕಂಬವೂ ತುಂಡಾಗಿದ್ದು, ಘಟನೆಯಿಂದ ಸ್ಥಳೀಯವಾಗಿ ಆತಂಕ ಉಂಟಾಯಿತು.


























