ಪುತ್ತೂರು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ಜು.30ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಮೂಡಾ ಅಧ್ಯಕ್ಷರಾದ ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ರವಿಶಂಕರ್ ಮಿಜಾರು ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಎಲ್ಲಾ ಜಾತಿಗಳನ್ನು ಒಟ್ಟು ಮಾಡಿ ದೇಶಕ್ಕೆ ಸಮರ್ಥ ರಾಜಕೀಯ ಕೊಡುವ ಏಕೈಕ ಉದ್ದೇಶ ದಿಂದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶೇ.50 ಸಮುದಾಯವನ್ನು ಒಟ್ಟು ಮಾಡಿದ ಪರಿಣಾಮ 2019 ರಲ್ಲಿ ಬಿಜೆಪಿ ಜಯಗಳಿಸಲು ಸಾಧ್ಯ ಆಯಿತು ಎಂದು ಹೇಳಿದರು. ಹಿಂದುಳಿದ ಮೋರ್ಚದ ಜಿಲ್ಲಾ ಅಧ್ಯಕ್ಷ ಆರ್ ಸಿ ನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿಜಿ ಜಗನ್ನಿವಾಸ ರಾವ್, ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಕಾರ್ಯದರ್ಶಿ ವಿಠಲ ಪೂಜಾರಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಒಬಿಸಿ ಮೋರ್ಚಾ ಪ್ರಬವಾರಿಯಾಗಿರುವ ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಭರತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿಂದುಳಿದ ಮೋರ್ಚಾದ ಪುತ್ತೂರು ಮಂಡಲದ ಸುನಿಲ್ ದಡ್ಡು, ಪುತ್ತೂರು ನಗರ ಅಧ್ಯಕ್ಷ ಶಿವರಾಮ ಸಪಲ್ಯ, ಜಿಲ್ಲಾ ಕಾರ್ಯದರ್ಶಿ ಸಜಿಪ, ರಕ್ಷಿತ್, ಉದಯ ಕುಮಾರ್ ಹೆಚ್, ಅನಿಲ್ ದಾಸ್, ಅಜಂತ ಕುಲಾಲ್ ಅತಿಥಿಗಳನ್ನು ಗೌರವಿಸಿದರು. ಜ್ಯೋತಿ ಆರ್ ನಾಯಕ್ ಪ್ರಾರ್ಥಿಸಿದರು. ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೋಗಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಹಿಂದುಳಿದ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಮಾಧವ ಚಾಂತಲ ವಂದಿಸಿದರು.