ಪುತ್ತೂರು: ಪಕ್ಷ ಸಂಘಟನಾ ಕೆಲಸಗಳಲ್ಲಿ ಸ್ವಲ್ಪ ಮಟ್ಟಿಗೆ ನಾವು ಹಿಂದುಳಿದಿದ್ದೆವು, ಆದರೆ ನೂತನ ಬ್ಲಾಕ್ ಅಧ್ಯಕ್ಷರು ಹಾಗೂ ಅವರ ತಂಡ ಇದೀಗ ಪಕ್ಷವನ್ನು ತಳ ಮಟ್ಟದಲ್ಲಿ ಕಟ್ಟುವುದಕ್ಕೆ ವಹಿಸುತ್ತಿರುವ ಅವಿರತ ಶ್ರಮ ಶ್ಲಾಘನೀಯ ಎಂದು ಮಾಜಿ ಜಿ.ಪ. ಸದಸ್ಯ ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುರೇಶ ಕುಮಾರ್ ಸೊರಕೆ ಹೇಳಿದರು.
ಅವರು ಮುಂಡೂರು ಗ್ರಾಮ ಪಂಚಾಯತ್ ನ ಸರ್ವೆ ವಲಯ ಸಮಿತಿಯ 1 ನೇ ಬೂತ್ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ನ ಭದ್ರ ಕೋಟೆಯಾಗಿದ್ದ ಸರ್ವೆ ಮುಂಡೂರು ಗ್ರಾಮದಲ್ಲಿ ನಮ್ಮಕೆಲವು ವ್ಯತ್ಯಾಸಗಳಿಂದ ಕಾಂಗ್ರೆಸ್ ಸ್ವಲ್ಪ ಹಿನ್ನಡೆ ಕಂಡಿದ್ದೇವೆ, ಮುಂದಿನ ದಿನಗಳಲ್ಲಿ ನಾವೆಲ್ಲಾ ಒಗ್ಗಟ್ಟಾಗಿ ಪಕ್ಷದ ಕೆಲಸ ಮಾಡಬೇಕಾಗಿದೆ ಎಂದರು.
ಮುಂಡೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಯಸ್.ಡಿ ವಸಂತ್ ರವರ ಮನೆಯಲ್ಲಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ, ಉಸ್ತುವಾರಿ ಯಾಕೂಬು ಮುಲಾರ್ ರವರ ನೇತೃತ್ವದಲ್ಲಿ ಸಭೆ ನಡೆಯಿತು.
ಈ ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ 1ನೇ ವಾರ್ಡ್ ನ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
- ಅಧ್ಯಕ್ಷರಾಗಿ : ಅಶೋಕ್ ಯಸ್.ಡಿ
- ಉಪಾಧ್ಯಕ್ಷರಾಗಿ : ಶರೀಪ್ ಯಸ್.ಎಂ ಮತ್ತು ರಾಜೇಶ್ ಯಸ್.ಡಿ
- ಕಾರ್ಯದರ್ಶಿಯಾಗಿ: ವಸಂತ ಬಿ.
- ಜೊತೆ ಕಾರ್ಯದರ್ಶಿ : ದಿನೇಶ್ ಭಕ್ತಕೋಡಿ
- ಖಜಾಂಜಿಯಾಗಿ : ಕಿರಣ್ ಯಸ್.ಡಿ
- ಸದಸ್ಯರಾಗಿ : ಗೌತಮ್ , ಕೊರಗಪ್ಪ, ಹರೀಶ್, ಪ್ರಕಾಶ್, ಪೊಡಿಯ ಎಸ್, ಜಯಪ್ರಕಾಶ್, ಬಾಲಕೃಷ್ಣ ಕಲ್ಲಗುಡ್ಡೆ, ಬೊಗ್ಗ ಮುಗೇರ ರವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಂಡೂರು ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಡಿ ವಸಂತ, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಳಾದ ಅಮಲ ರಾಮಚಂದ್ರ, ಪೂರ್ಣೇಶ್ ಕುಮಾರ್ ಭಂಡಾರಿ, ಬ್ಲಾಕ್ ಕಾರ್ಯದರ್ಶಿ ಸಿರಿಲ್ ರೋಡ್ರಿಗಸ್, ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶರೊನ್ ಸಿಕ್ವೆರಾ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾರದಾ ಅರಸ್, ಮಹಿಳಾ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜೆ, ಬ್ಲಾಕ್ ಕಾಂಗ್ರೆಸ್ ಸಮಿತಿ ಸದಸ್ಯರಾದ ರಾಮಚಂದ್ರ ಸೊರಕೆ, ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ರಾದ ಕಮಲೇಶ್ ಎಸ್ ಡಿ, ಕಾಂಗ್ರೆಸ್ ಕಾರ್ಯ ಕರ್ತರಾದ ಶ್ರೀಮತಿ ಸೀತಾ ಸರ್ವೆ, ಯತೀಶ್ ರೈ ಮೇಗಿನಗುತ್ತು, ಬಾಲಕೃಷ್ಣ ಕಲ್ಲಗುಡ್ಡೆ, ಪೊಡಿಯ ಸರ್ವೆ, ಗೌತಮ್, ಜಯಪ್ರಕಾಶ್, ದಿನೇಶ್ ಭಕ್ತಕೋಡಿ, ಅಶೋಕ ಎಸ್ ಡಿ, ಕಿರಣ್ ಎಸ್ ಡಿ, ಕೊರಗಪ್ಪ ಎ, ರಾಜೇಶ್ ಎಸ್ ಡಿ, ಹರೀಶ್ ಆಲೇಕಿ, ಕೆ ಪಿ ಬೊಗ್ಗು ಮುಗೇರ ಆನಂದ ಪೂಜಾರಿ, ಹಂಝ ಎಂ, ಎಸ್ ಶರೀಫ್ ಸರ್ವೆ ಮೊದಲಾದವರು ಉಪಸ್ಥಿತರಿದ್ದರು.