ಕಾವು: ಪುತ್ತೂರು ತಾಲೂಕು ಯುವ ಮೋರ್ಚಾ ಗ್ರಾಮಾಂತರ ಮಂಡಲದ ವತಿಯಿಂದ ರಕ್ಷಾ ಬಂಧನವನ್ನು ವಿಶಿಷ್ಟವಾಗಿ ರಕ್ಷಾ ಸಂಕಲ್ಪ ಉತ್ಸವ ಎಂದು ಆಚರಿಸಲಾಯಿತು.
ಈ ಹಿನ್ನಲೆಯಲ್ಲಿ ಕೋವಿಡ್ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ರಕ್ಷಣೆಯ ಕಾರ್ಯ ನೆರವೇರಿಸಿದ ಕಾವು ಆರೋಗ್ಯ ಸಹಾಯಕಿಯರು ಮತ್ತು ಆಶಾಕಾರ್ಯಕರ್ತೆಯರ ಮನೆಗೆ ಭೇಟಿ ನೀಡಿ ರಕ್ಷೆ ಕಟ್ಟಿ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಡ್ನೂರು ಶಕ್ತಿ ಕೇಂದ್ರ ಸಂಚಾಲಕ ಲೋಕೇಶ್ ಚಾಕೋಟೆ, ಪುತ್ತೂರು ಗ್ರಾಮಾಂತರ ಮಂಡಲದ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು, ಬಿಜೆಪಿ ಪ್ರಮುಖರಾದ ರಾಮಣ್ಣ ನಾಯ್ಕ ಆಚಾರಿಮೂಲೆ,ಸಂಕಪ್ಪ ಪೂಜಾರಿ ಚಾಕೋಟೆ, ನಿರಂಜನ್ ರಾವ್ ಕಮಲಡ್ಕ, ಯುವ ಮೋರ್ಚಾ ನೆಟ್ಟಣಿಗೆ ಮುಡ್ನೂರು ಮಹಾ ಶಕ್ತಿ ಕೇಂದ್ರ ಸದಸ್ಯ ಅಜಿತ್ ಮಿನೋಜಿಕಲ್, ನನ್ಯ ಬೂತ್ ಯುವ ಮೋರ್ಚಾ ಸಂಚಾಲಕ ಯತೀಶ್ ರೈ ಮಧ್ಲ, ಸಹ ಸಂಚಾಲಕ ಸಂದೇಶ್ ಚಾಕೋಟೆ, ತಿರುಮಲೇಶ್, ಹರ್ಷ ಎ ಆರ್,ಶ್ರವಣ್ ಕುಮಾರ್ ಉಪಸ್ಥಿತರಿದ್ದರು.