ವಿಟ್ಲ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವಿಟ್ಲ ಮಹಾಶಕ್ತಿ ಕೇಂದ್ರದ ಸಭೆಯು ವಿಟ್ಲ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್ ವಿಟ್ಲ ವಹಿಸಿದ್ದರು. ಕ್ಷೇತ್ರ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಸುನಿಲ್ ಕುಮಾರ್ ದಡ್ಡು ಅವರು ಸಂಘಟನಾತ್ಮಕವಾಗಿ ಸಲಹೆ ಸೂಚನೆ ನೀಡಿದರು.ಸಭೆಯಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲ ರವರು ಕಲ್ಯಾಣ್ ಸಿಂಗ್ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಕ್ಷಾಬಂಧನ ಆಚರಿಸಲಾಯಿತು. ಕಡಬ ತಾಲೂಕು ಉದ್ಯೋಗಿ ಮಿಲನ್ ಪ್ರಮುಖ್ ಆದರ್ಶ ಶೆಟ್ಟಿ ಇವರು ರಕ್ಷಾಬಂಧನದ ಸಂದೇಶ ನೀಡಿದರು.
ಸಭೆಯಲ್ಲಿ ಒಬಿಸಿ ಮೋರ್ಚಾದ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಪ್ರಭು, ಮಹಾಶಕ್ತಿ ಕೇಂದ್ರದ ಒಬಿಸಿ ಮೋರ್ಚಾ ಸಂಚಾಲಕ ಲೋಕೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಂಡಲ ಸಮಿತಿ ಸದಸ್ಯ ರಾಜೇಶ್ ಬೊಬ್ಬೆಕೇರಿ ಸ್ವಾಗತಿಸಿ, ಮಂಡಲ ಉಪಾಧ್ಯಕ್ಷ ಉದಯ ಕುಮಾರ್ ಆಲಂಗಾರು ವಂದಿಸಿದರು.