ಬೆಳ್ತಂಗಡಿ: ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ದಿವಂಗತ ಟೈಗರ್ ಪ್ರಭಾಕರ್ ಅವರ ಮಗ ಸ್ಯಾಂಡಲ್ ವುಡ್ ನ ಖ್ಯಾತ ನಟ ವಿನೋದ್ ಪ್ರಭಾಕರ್ ರವರು ಆ.31 ರಂದು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ಆಶೀರ್ವಾದವನ್ನು ಪಡೆದರು.

2015 ರಲ್ಲಿ ‘ಗಡಿಪಾರ್' ಚಿತ್ರದಿಂದ ಸಿನಿಪಯಣ ಆರಂಭಿಸಿದ ವಿನೋದ್ ಪ್ರಭಾಕರ್
‘ಟೈಸನ್’, ‘ಕ್ರ್ಯಾಕ್',
‘ಬೆಳ್ಳಿ’, `ಗಜೇಂದ್ರ’, ಹೋರಿ’, ‘ನವರತ್ನ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚಿಗೆ ತೆರೆ ಕಂಡ ದರ್ಶನ್ ರವರ ಹಿಟ್ ಸಿನಿಮಾ ‘ರಾಬರ್ಟ್’ ನಲ್ಲಿ ಕೂಡ ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ.



