ಬಂಟ್ವಾಳ: ತಾಲೂಕು ವೀರಕಂಭ ಗ್ರಾಮದ ಭಾರತೀಯ ಜನತಾ ಪಕ್ಷದ ಶಕ್ತಿ ಕೇಂದ್ರದ ಮತ ಗಟ್ಟೆ ಸಂಖ್ಯೆ 203ರ ಸಮಿತಿ ಪುನರ್ ರಚನೆ ಕಾರ್ಯಕ್ರಮವೂ ಜಿಲ್ಲಾ ಎಸ್ ಟಿ ಮೋರ್ಚಾದ ಸದಸ್ಯರಾದ ಕೇಶವ ನಾಯ್ಕ ಕೆಮ್ಮಟೆ ರವರ ಮನೆಯಲ್ಲಿ ನಡೆಯಿತು.
ಬೂತ್ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಪೂಜಾರಿ ಬೆತ್ತಸರವು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಆಚಾರ್ಯ ಎರ್ಮೆಮಜಲು ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಬಿಜೆಪಿ ವೀರಕಂಭ ಪ್ರಭಾರಿ ಚೆನ್ನಪ್ಪ ಕೋಟ್ಯಾನ್, ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್, ಪಂಚಾಯತ್ ಸದಸ್ಯರಾದ ಮೀನಾಕ್ಷಿ, ಜಯಂತಿ, ಸಹಕಾರಿ ಸಂಘದ ನಿರ್ದೇಶಕರಾದ ಕೊರಗಪ್ಪ ನಾಯ್ಕ್ ಮತ್ತು ನೋಣಯ್ಯ ಯಂ ಆರ್, ಮಂಡಲದ ಹಿಂದುಳಿದ ವರ್ಗದ ಸದಸ್ಯರಾದ ವೀರಪ್ಪ ಯಂ, ಹಾಗೂ ಬೂತ್ ಸಮಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.