ವಿಟ್ಲ: ಶ್ರೀ ಶಾರದಾಂಬ ಭಜನಾ ಮಂಡಳಿ (ರಿ.) ಅಶೋಕನಗರ ಅಳಕೆಮಜಲು ಇದರ ವತಿಯಿಂದ ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಅ.7 ರಿಂದ 15ರ ತನಕ ಒಂಭತ್ತು ದಿನಗಳ ಕಾಲ 39ನೇ ವರ್ಷದ ಶ್ರೀ ಶಾರದೋತ್ಸವ ನಡೆಯಲಿದೆ.
ಕಾರ್ಯಕ್ರಮ ವಿವರ:
ಅ.13 ರಂದು ಬುಧವಾರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯಿಂದ ಭಜನಾ ಸೇವೆ
ಅ.14 ರಂದು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಭಜನಾ ಸೇವೆ
ಅ.15 ರಂದು ಶುಕ್ರವಾರ ಬೆಳಿಗ್ಗೆ ಗಂಟೆ 8.00ಕ್ಕೆ : ಗಣಪತಿ ಹವನ, ಬೆಳಿಗ್ಗೆ ಗಂಟೆ 9.00ಕ್ಕೆ : ಧ್ವಜಾರೋಹಣ, ಬೆಳಿಗ್ಗೆ ಗಂಟೆ 9.15ಕ್ಕೆ : ಮೂರ್ತಿ ಪ್ರತಿಷ್ಠೆ ವೇ। ಮೂ ಶ್ರೀಧರ ಭಟ್ ಕಬಕ ಇವರ ಪೌರೋಹಿತ್ಯದಲ್ಲಿ ನಡೆಯಲಿದೆ.
ಮಾಣಿ ಎಲ್. ಕೆ. ಧರಣ್ ಮತ್ತು ಬಳಗದಿಂದ ಹರಿನಾಮ ಸಂಕೀರ್ತನೆ. ಬೆಳಿಗ್ಗೆ ಗಂಟೆ 11.00ರಿಂದ 12.30ರ ತನಕ : ಕುಣಿತ ಭಜನೆ – ಶ್ರೀರಾಮ ಭಜನಾ ಮಂಡಳಿ ಮುಚೂರು, ಕಾನ ಮಂಗಳೂರು ಇವರಿಂದ. ಮಧ್ಯಾಹ್ನ ಗಂಟೆ 100: ಮಹಾಪೂಜೆ, ಅನ್ನಸಂತರ್ಪಣೆ ಸಂಜೆ ಗಂಟೆ 3.30ಕ್ಕೆ : ಮಹಾಮಂಗಳಾರತಿ, ವಂದೇ ಮಾತರಂ, ಮೂರ್ತಿ ಜಲಸ್ತಂಭನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.