ಬಿಸಿರೋಡು: ರಕ್ತೇಶ್ವರಿ ದೇವಸ್ಥಾನ ಹಿಂಭಾಗದಲ್ಲಿರುವ ಪ್ರೀತಿ ಕಾಂಪ್ಲೆಕ್ಸ್ ನಲ್ಲಿ ‘ಸ್ವಾತಿ ಕ್ಲಿನಿಕ್ ಹಾಗೂ ವಕೀಲರ ಕಛೇರಿ’ ಅ.21 ರಂದು ಶುಭಾರಂಭಗೊಂಡಿತು.
ಉದ್ಯಮಿ ಕೃಷ್ಣ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಡಾ.ರಾಜೇಶ್ ಪೂಜಾರಿ ನೇತೃತ್ವದಲ್ಲಿ ಸ್ವಾತಿ ಆರ್ಯುವೇದ ಚಿಕಿತ್ಸಾಲಯ ಕಾರ್ಯನಿರ್ವಹಿಸಲಿದೆ ಹಾಗೇ ಶೈಲಜಾ ರಾಜೇಶ್ ರವರ ನೇತೃತ್ವದಲ್ಲಿ ವಕೀಲರ ಕಛೇರಿಯಲ್ಲಿ ಡಾಕ್ಯುಮೆಂಟ್ ಬರಹ, ಮಹಿಳಾ ಮತ್ತು ಮಕ್ಕಳ ಆಪ್ತ ಸಮಾಲೋಚನೆ ಹೀಗೆ ವಿವಿಧ ಸೇವೆಗಳು ಲಭ್ಯವಿರಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಗಣ್ಯಅತಿಥಿಗಳು ಉಪಸ್ಥಿತರಿದ್ದರು.