ಬಂಟ್ವಾಳ: ಸಿಡಿಲು ಬಡಿದು ಪಂಪ್ ಶೆಡ್ಡ್ ಭಸ್ಮಗೊಂಡ ಘಟನೆ ಶನಿವಾರ ರಾತ್ರಿ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ನಡೆಸಿದೆ.
ಎನಿಲಕೋಡಿಯ ಕೃಷಿಕ ನಾರಾಯಣ ಸಪಲ್ಯ ರವರ ತೋಟದ ಶೆಡ್ಡಿಗೆ ರಾತ್ರಿ ವೇಳೆ ಸಿಡಿಲು ಬಡಿದಿದ್ದು, ಶೆಡ್ ಸಂಪೂರ್ಣ ಹೊತ್ತಿ ಉರಿದಿದೆ.
ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಶೆಡ್ ನಲ್ಲಿದ್ದ ಅಡಿಕೆ, ತೆಂಗಿನಕಾಯಿ ಸುಟ್ಟು ಭಸ್ಮವಾಗಿದೆ.